top of page

ನಾನು ಮುದುಕನಾದೆ

ನನಗೀಗ ವಯಸ್ಸು ಎಂಬತ್ತೊಂದು ಹೌದು ಮುದಿ ವಯಸ್ಸು ಆದರೂ ನಾನು ಮುದುಕನಾಗಿರಲಿಲ್ಲ ಯಾಕೆಂದರೆ ನನಗಿರಲಿಲ್ಲ ಬಿ.ಪಿ.,ಶುಗರ್ ಹಮ್ಮೆಯಿತ್ತು ಬೀಗಿದೆ ಮಾಡಿಸಿರಲಿಲ್ಲ ಯಾವುದೇ ಟೆಸ್ಟ್ ಹಾಗಾಗಿ ಹಾಯಾಗಿದ್ದೆ ನಿರಾಳವಾಗಿದ್ದೆ ಮೊನ್ನೆ,ಮೊನ್ನೆ ವಕ್ಕರಿಸಿದವು ಎರಡೂ ಸದ್ದಿಲ್ಲದೆ (ಬಿ.ಪಿ.,ಶುಗರ್) ಸಾವಿನ ರೂವಾರಿಗಳು (ವಯೋ ಸಹಜ ಕಾಯಿಲೆಯಂತೆ !) ಎಲ್ಲದಕ್ಕೂ ಮಿತಿ ಕೆಲವಕ್ಕೆ ಹತ್ತಿರ ಸುಳಿಯಲಿಕ್ಕೂ ಇಲ್ಲ ಗುಳಿಗೆಯ ದಾಸ ಆಯ್ತು ಶರೀರ ನಾನಾದೆ ಈಗ ನಿಜವಾದ ಮುದುಕ **ಪ್ರೊ.ವೆಂಕಟೇಶ ಹುಣಶೀಕಟ್ಟಿ****

ನಾನು ಮುದುಕನಾದೆ
bottom of page