top of page
ನಾಡ ನಾಡಿ ನನ್ನ ನುಡಿ
ನಾಡ ನಾಡಿ ನನ್ನ ನುಡಿ ನೇಹ ನನ್ನಿಯ ಸನ್ನುಡಿ ನೆನಪಿಡಿ ಇದು ತಾಯಿನುಡಿ ಮರೆತು ಮರುಗಬೇಡಿ. ಆನುಡಿ ಈ ನುಡಿ ಗಡಿಬಿಡಿ ಏಕೆ ಸಿಡಿಮಿಡಿ..? ಕಲಿತುಬಿಡಿ. ಅನ್ಯತನವನು ಬಿಟ್ಟು ಬಿಡಿ ಎಲ್ಲರೊಂದಿಗೆ ಕಲೆತುಬಿಡಿ ಕನ್ನಡಾ ಕನ್ನಡಿ ಜೋಪಾನವಾಗಿಡಿ ಮತ್ತೆ ಮತ್ತೆ ಮುಖನೋಡಿ. ಕೊಳೆ ಕಳಚಿ ಹೊಳೆವಂತೆ ತಡೆಮೀರಿ ಬೆಳೆವಂತೆ ಸ್ವಚ್ಛಂದವಾಗಿ ಅರಳ ಬಿಡಿ. ಕಾಲದಾಳದಿಂದ ಎದ್ದ ನುಡಿ ಆಕಾಶದೆತ್ತರಕೆ ನೆಗೆಯಬಿಡಿ. ಕರುನಾಡು ಕಿರಿದಲ್ಲ. ಕೋಟಿದನಿಗೂಡಿ ಅಖಿಲ ವಿಶ್ವಕೆ ಕಂಪ ಹರಡಿಬಿಡಿ. ಸುಬ್ರಾಯ ಮತ್ತೀಹಳ್ಳಿ
bottom of page