ನಾಗೇಂದ್ರರಿಗೊಂದು ಸಲಾಮ್!
ಕರಾಳ ಕರೊನಾ ಎಲ್ಲಾ ಕ್ಷೇತ್ರವನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಲಾಕ್ಡೌನ್ ನಿಂದ ಕೆಲಸ ಕಳೆದುಕೊಂಡ ಅನೇಕರು ಆತ್ಮ ಹತ್ಯೆ ಮಾಡಿಕೊಂಡ ಕಹಿ ಘಟನೆ ನಮ್ಮ ಕಣ್ಮುಂದಿದೆ! ಡಿಗ್ನಿಟಿ ಆಫ್ ಲೇಬರ್ ಅಳವಡಿಸಿ ಕೊಳ್ಳದ ಹಲವರು ಇನ್ನು ಹೆಚ್ಚು ನಿರುದ್ಯೋಗಿಗಳಾಗುವ ಪ್ರಸಂಗ ಒದಗಿ ಬಂತು. ಬದಲಾದ ಕಠಿಣ ಪರಿಸ್ಥಿತಿಗೆ ಹೊಂದಿಕೊಳ್ಳ ಬೇಕಾದದ್ದು ಇಂದಿನ ಅಗತ್ಯ ಮತ್ತು ಅನಿವಾರ್ಯತೆ ಎಂಬುದನ್ನು ಮರೆಯ ಬಾರದು. ವಾಸ್ತವ ಹೀಗಿರುವಾಗ ಸಂತಸದ ಹಾಗೂ ಹೆಮ್ಮೆಯ ಸಂಗತಿಯೊಂದು ನನ್ನ ಅನುಭವಕ್ಕೆ ಬಂತು. ಅಂದು ನಾನು ಯಲ್ಲಾಪುರದಿಂದ ರಾಷ್ಟ್ರೀಯ ಹೆದ್ದಾರಿ 63ನ್ನು ಬಳಸಿ ಅಂಕೋಲೆಯ ಕಡೆ ಸಾಗುತ್ತಿದ್ದೆ. ಮೂಲಮನೆ ಎಂಬಲ್ಲಿ ಅನಾನಸ್ ಹಣ್ಣುಗಳನ್ನು ರಸ್ತೆಯ ಪಕ್ಕದಲ್ಲಿ ಇಟ್ಟು ಕೊಂಡು ಮಾರಾಟ ಮಾಡುತ್ತಿದ್ದ ಯುವಕ ನನ್ನ ಗಮನ ಸೆಳೆದ. ನಮ್ಮ ಕಾರಿನ ಚಾಲಕ ಶಫಿ ಶೇಖ ಚೌಕಸಿ ಮಾಡಿ ಅನಾನಸ್ ಕೊಂಡು ಕೊಂಡ. ಆ ಅನಾನಸ್ ಮಾರಾಟ ಮಾಡುವ ಹುಡುಗ ಪ್ರತಿಷ್ಠಿತ ಕಾಲೇಜಿನಲ್ಲಿ ಉತ್ತಮ ಅಂಕಗಳೊಂದಿಗೆ ಬಿ.ಇ. ಮುಗಿಸಿ ಬೆಂಗಳೂರಿನ ಹೆಸರಾಂತ ಕಂಪನಿಯಲ್ಲಿ ನೌಕರಿಯಲ್ಲಿದ್ದವರು. ಕರೊನಾದಿಂದ ಮನೆ ಸೇರಿದ ಅವರು ಮತ್ತೆ ಬೆಂಗಳೂರಿಗೆ ಹೋಗುವ ಸಿದ್ಧತೆಯಲ್ಲಿದ್ದಾರೆ. ಮನೆಯಲ್ಲಿ ಬೆಳೆದ ಅನಾನಸ್ನ್ನು ಯಾವ ಕೀಳರಿಮೆ ಇಲ್ಲದೇ ಸಾಮಾನ್ಯರಂತೆ ಮಾರಾಟ ಮಾಡುತ್ತಿದ್ದಾರೆ. ನಮ್ಮ ಎಲ್ಲ ಯುವಕ ಯುವತಿಯರು ಈ ಬಗೆಯ ಡಿಗ್ನಿಟಿ ಆಫ್ ಲೇಬರ್ ಅಳವಡಿಸಿ ಕೊಂಡರೆ ನಿರುದ್ಯೋಗ ಕಾಡದಂದೆನಿಸಿತು. ಅವರೇ ಅಂಕೋಲಾ ತಾಲೂಕಿನ ಮೂಲೇಮನೆ ನಿವಾಸಿ ನಾಡುಮಾಸ್ಗೇರಿ ಮೂಲದ ನಾಗೇಂದ್ರ ರಾಮಚಂದ್ರ ಗಾಂವಕರ! ಈ ಮಾದರಿ ನಾಗೇಂದ್ರರಿಗೊಂದು ಸಲಾಮ್! -ಬೀರಣ್ಣ ನಾಯಕ ಮೊಗಟಾ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ವಾಯ್.ಟಿ.ಎಸ್.ಎಸ್. ಕಾಲೇಜಿನಲ್ಲಿ ಉಪನ್ಯಾಸಕರಾಗಿ ಎನ್.ಎಸ್,ಎಸ್. ಕಾರ್ಯಕ್ರಮಾಧಿಕಾರಿಯಾಗಿ, ಪ್ರಾಂಶುಪಾಲರಾಗಿ ಸೇವೆಸಲ್ಲಿಸಿದ ಇವರು ಮೂಲತಹ ಅಂಕೋಲಾ ತಾಲೂಕಿನ ಮೊಗಟಾ ಊರಿನ ಸ್ವಾತಂತ್ರ್ಯಯೋಧರ ಮಗ. ರಾಜ್ಯ ಸರಕಾರ ನೀಡುವ ರಾಜ್ಯ ಪ್ರಶಸ್ತಿಗಳಾದ 'ಅತ್ಯುತ್ತಮ ಪ್ರಾಂಶುಪಾಲ' ಪ್ರಶಸ್ತಿ ಹಾಗೂ 'ಅತ್ಯತ್ತುಮ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ' ಪ್ರಶಸ್ತಿ. ಕನರ್ಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ನೀಡುವ ರಾಜ್ಯ ಮಟ್ಟದ 'ಅತ್ಯುತ್ತಮ ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ' ಪ್ರಶಸ್ತಿ.ಕನರ್ಾಟಕ ರಾಜ್ಯ ಸರಕಾರಿ ಪದವಿ ಪೂರ್ವ ಉಪನ್ಯಾಸಕರ ಸಂಘ ನೀಡುವ ರಾಜ್ಯ ಮಟ್ಟದ 'ಅತ್ಯುತ್ತಮ ಉಪನ್ಯಾಸಕ' ಪ್ರಶಸ್ತಿ. ಗುಜರಾತ ಮತ್ತು ತಮಿಳುನಾಡಿನಲ್ಲಿ ನಡೆದ 'ಎನ್.ಎಸ್.ಎಸ್. ರಾಷ್ಟ್ರೀಯ ಭಾವೈಕ್ಯತಾ ಶಿಬಿರ' ದಲ್ಲಿ ಸ್ವಯಂ ಸೇವಕರೊಡನೆ ಕನರ್ಾಟಕದ ಪ್ರತಿನಿಧಿಯಾಗಿ ಭಾಗವಹಿಸಿ ಅತಿ ಹೆಚ್ಚು ಪ್ರಶಸ್ತಿ ಗಳಿಕೆ. ಅನೇಕ ರಾಜ್ಯ ಮಟ್ಟದ ಎನ್.ಎಸ್.ಎಸ್.ಶಿಬಿರಗಳನ್ನೊಳಗೊಂಡು, ರಾಜ್ಯ ಮಟ್ಟದ ಎನ್.ಎಸ್.ಎಸ್. ಯುವಜನೋತ್ಸವಗಳ ಸಂಘಟನೆ. ಎನ್.ಎಸ್.ಎಸ್.ನಲ್ಲಿ ರಾಷ್ತ್ರೀಯ ದಾಖಲೆ. ಉತ್ತರ ಕನ್ನಡ ಜಿಲ್ಲಾಡಳಿತ ನಿಮರ್ಿಸಿದ 'ಡಾ. ಬಿ.ಆರ್. ಅಂಬೇಡ್ಕರ್' ಸಾಕ್ಷ್ಯ ಚಿತ್ರದಲ್ಲಿ ಅಂಬೇಡ್ಕರ ಪಾತ್ರ. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಸಾವಿರಕ್ಕು ಹೆಚ್ಚು ಸಾಹಿತ್ಯ ಪ್ರಕಾರಗಳು ಪ್ರಕಟವಾಗಿವೆ.ಆಕಾಶವಾಣಿ ಮತ್ತು ದೂರದರ್ಶನದಲ್ಲಿ ನೂರಕ್ಕೂ ಹೆಚ್ಚು ಕಾರ್ಯಕ್ರಮಗಳ ಪ್ರಸಾರ. ದೂರದರ್ಶನದಲ್ಲಿ ಪ್ರಸಾರವಾದ ವಿ.ಶ್ರೀನಿವಾಸಮೂರ್ತಿ ನಿರ್ದೇಶಿತ ಮಕರಂದ ಸಾಕ್ಷ್ಯ ಚಿತ್ರ ಧಾರಾವಾಹಿಗೆ ಸಾಹಿತ್ಯ ನೀಡಿಕೆ. ಹಲವಾರು ಸಂಘಟನೆಯಲ್ಲಿ ಪದಾಧಿಕಾರಿಯಾಗಿ ಸೇವೆ. ರಾಜ್ಯ ಮಟ್ಟದ ಕ್ರೀಡಾಕೂಟ ಹಾಗೂ ಅನೇಕ ಕಾರ್ಯಕ್ರಮಗಳ ಸಂಘಟನೆ. ಹಲವಾರು ನಿಸರ್ಗ ಛಾಯಾ ಚಿತ್ರಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟ ಹಾಗೂ ಕರಾವಳಿ ಉತ್ಸವ ಒಳಗೊಂಡು ಪ್ರದರ್ಶನ ಕಂಡಿವೆ