top of page

ನನ್ನ ಕೆಲ 'ಹೈಕು'ಗಳು

( ಸಾಮಾನ್ಯವಾಗಿ ಹೈಕುಗಳಿಗೆ ಹದಿನೇಳು ಅಕ್ಷರಗಳನ್ನು ಬಳಸಲಾಗುತ್ತದೆ. ನಾನು ಆ ಮಿತಿಯನ್ನು ಇಟ್ಟುಕೊಂಡಿಲ್ಲ. ) * ಬಾಯ್ದೆರೆದ ಭೂಮಿಗೆ ಮಳೆ ಹನಿಯ ಮಧುರ ಚುಂಬನ * ಹಣ್ಣೆಲೆ ಉದುರಿತು ಹಸಿರೆಲೆ ನಗಲಿಲ್ಲ ನಾಳೆಯ ನೆನಪಾಗಿ * ನಡೆಯುವವ ಎಡವಿ ಬಿದ್ದ ಕುಳಿತವನ ಮೇಲೆ * ಕುದಿವ ಮನದಲ್ಲಿ ನೂರಾರು ಕಥೆಗಳು ತಲೆಬರೆಹವೇ ಇಲ್ಲ * ಬದುಕಿನ ಪಾಟಿಯ ಮೇಲೆ ಒಂದಿಷ್ಟು ನೆನಪಿನ ಗೀರುಗಳು * ಭತ್ತದ ಗೊಂಚಲು ನೆಲಕೆ ಬಾಗಿತು ಕೃತಜ್ಞತೆ ಸೂಚಿಸಲು * ಮೋಡ ನೆಲದಿಂದ ತಂದ ನೀರು ನೆಲಕೇ ಸುರಿಸಿ ಋಣ ತೀರಿಸಿತು * ಬಾನ ಕಪ್ಪು ಮೊಗದಿ 'ಮಿಂಚಿ'ತು ಬಿಳಿ ಹಲ್ಲುಗಳ ನಗೆ * ಸಾವಿಗಿಲ್ಲ ಸಂಬಂಧಿಕರು ಸಮಭಾವ ಸಮಚಿತ್ತ ಕರ್ತವ್ಯದತ್ತ - ಎಲ್. ಎಸ್. ಶಾಸ್ತ್ರಿ

ನನ್ನ ಕೆಲ 'ಹೈಕು'ಗಳು
bottom of page