top of page

ದಾರಿಯಲಿ ನಿಂತವರಿಗೆ

*ದಾರಿಯಲೆ ನಿಂತವರಿಗೆ* ದಾರಿಗಳಿವೆ ಇಲ್ಲಿ:ಬಾಳಿನಲಿ ಒಂದೇ ಅಲ್ಲ,ನೂರಾರು, ಇರುವ ದಾರಿಗಳನೂ ಹುಡುಕುವುದೆ, ಸುಮ್ಮನೆ!? ಮೀನಿಗೆ ದಾರಿಯನು ಯಾರು ಕಾಣಿಸಿದವರು? ಹಾರುತ್ತಿಲ್ಲವೆ ಹಕ್ಕಿ ಗಗನದಲಿ ಸ್ವಚ್ಚಂದ? ಇರುವೆಯೂ ಹರಿಯುತ್ತದೆ ನೆಲದ ತುಂಬೆಲ್ಲ, ನಡೆಯುವ,ಹರಿಯುವ,ಶಕ್ತಿ ಇರುವಷ್ಟೇ ಹಾರುವ-- --ನೀನೇಕೆ ತೆವಳುತಿಹೆ ಇಂದಿಗೂ ಇಲ್ಲಿ!? ದಾರಿ ತೋರುವೆವೆಂಬ ನುಡಿಗಳನೆ ನಂಬಿ? ಮೈಯ ಕಣಕಣದಲ್ಲಿ ಕಸುವಿಹುದು ಅಪಾರ, ಮೊದಲದನು ಅರಿತುಕೋ ನಿನ್ನ ತಾಕತ್ತು, ನಡೆ,ಓಡು,ಈಜು,ಹಾರು ನಿನ್ನ ಅನ್ನದ ಮಾರ್ಗ ಹುಡುಕಿಕೋ ತಮ್ಮಾ. ಕಣ್ಣೆದುರು ತೋರಿಸುವ ಎಂಜಲಿಗೆ ಸುರಿಸದಿರು: ಕಟವಾಯಿ ತುಂಬೆಲ್ಲ ಜೊಲ್ಲಿನೊರತೆ, ನಿನ್ನ ದಾರಿಗೆ ನೀನೇ ಗುರು,ನಡೆವವನು ನೀನೇ, ಅರಿತುಕೋ ಮೊದಲಿದನು ತಡಮಾಡದೆ. ನಿನಗೆ ನೀನೇ ಮೊದಲು ಗುರುವಾಗು-- --ತೆರೆದುಕೊಳ್ಳಲು ದಾರಿ ಸಾವಿರಾರು. *ಗಣಪತಿ ಗೌಡ,ಹೊನ್ನಳ್ಳಿ* *ಅಂಕೋಲಾ*

ದಾರಿಯಲಿ ನಿಂತವರಿಗೆ
bottom of page