top of page
ಡಾ.ಸುರೇಶ ನಾಯ್ಕ
ಇಷ್ಟು ಧಾವಂತವೆ ನಿಮಗೆ ತಮ್ಮಾ ಪ್ರೀತಿಯನು ಮೊಗೆ ಮೊಗೆದು ಕೊಟ್ಟು ತಣಿಯದವರು ದಣಿಯದವರು ನೀವು ಚಿತ್ತಾಲರ ಬಗೆಗೆ ಸಂಶೋಧನೆಯ ನಡೆಸಿ ಡಾಕ್ಟರೇಟ ಪದವಿ ಪಡೆದ ಯಶೋವಂತ ಕವಿತೆ,ಸಂಶೋಧನೆ,ವಿಮರ್ಶೆ,ಸ್ಥಳಪುರಾಣ ಐತಿಹ್ಯ ಗ್ರಾಮದೇವಿಯ ಇತಿಹಾಸದ ಅನಾವರಣ ತಾಯಿ ದೇವರೆಂದು ಸಲಹಿ ತಂದೆಯನು ಸ್ಮರಿಸೆ ನಾರಾಯಣ ಸಾಹಿತ್ಯ ಸಂಸ್ಕೃತಿಕ ಪ್ರತಿಷ್ಠಾನ ರೇಲ್ವೆ ಇಲಾಖೆಯಲಿ ವೃತ್ತಿ ಅಧ್ಯಾಪನ ಪ್ರವೃತ್ತಿ ಹೊಸಪಟ್ಟಣದಲಿ ಹುಟ್ಟಿ ಪಟ್ಟಣವ ಸೇರಿ ಬಾರಾಗದ್ದೆಯಲಿ ನಾರಾಯಣ ಮನೆಯ ಒಡೆಯ ಬೆಳೆಯುವವನಿಗೆ ಬಾನೇಗಡಿ ನಮ್ಮ ಸುರೇಶನಿಗೆ ಬಹಳ ಗಡಿಬಿಡಿ ಹೊರಟೆ ಬಿಟ್ಟರು ಮುದ್ದು ಕುವರಿಯರ ಕೈ ಹಿಡಿದ ಪತ್ನಿಯನು ಬಂಧು ಬಳಗವನು ಬಿಟ್ಟು ವರುಷದ ಕೊನೆಯದಿನ ೩೧ ರ ಡಿಸೆಂಬರ ಬಾರದೂರಿಗೆ ನಡೆದರು ಸುರೇಶರು ನಾರಾಯಣ ನಾಯಕರ ಸುತರು ಸಾಹಿತ್ಯ ಸಂಸ್ಕೃತಿಯ ಸಂಪನ್ನರು. ಶ್ರೀಪಾದ ಶೆಟ್ಟಿ
bottom of page