top of page

ಜೈ ಹೋ ಭಾರತ

ಮುಗಿಲು ಮುಟ್ಟಿತು ಸಂತಸ ಸಡಗರ ಭಾರತ ಮಾತೆಯ ಮಕ್ಕಳಲಿ.. ಶಶಿಯ ಅಂಗಳದಿ ವಿಕ್ರಮ ಇಳಿದಿಹ ಅಪೂರ್ವ ಗಳಿಗೆಯ ನೋಡುತಲಿ. ಚಂದ್ರನ ಚುಂಬಿಸು ತ್ರಿವಿಕ್ರಮನ ಸಾಹಸ ನೋಡಿತು ಜಗವೇ ಕಾತುರದಿ.. ಆಹಾ! ಎಂತಹ ರೋಚಕ ಕ್ಷಣವದು ಎಂದಿತು ವಿಶ್ವವೇ ಸಂತಸದಿ. ಇಸ್ರೋ ವಿಜ್ಞಾನಿಗಳ ಅವಿರತ ಶ್ರಮಕೆ ಫಲಸಿಕ್ಕಿತು ಇಂದು ಭಾರತಕೆ.. ಇತಿಹಾಸ ಪುಟದಲಿ ದಾಖಲೆ ಆಯಿತು ಇಳಿಯಲು ಚಂದ್ರನ ಅಂಗಳಕೆ. ಚಂದ್ರಯಾನ ಮೂರು ಪಡೆಯಿತು ಯಶವು ಮೆರೆಯಿತು ಭಾರತ ವಿಶ್ವಗುರುವಾಗಿ.. ಇಸ್ರೋ ವಿಜ್ಞಾನಿಗಳ ಸಾಧನೆ ನೆನೆವ ಅಭಿನಂದನೆ ಸಲ್ಲಿಸಿ ಕುಶಿಯಾಗಿ . ಸಾತುಗೌಡ ಬಡಗೇರಿ.ಅಂಕೋಲಾ ಪದ್ಮಶ್ರೀ ಸುಕ್ರಿ ಗೌಡ ಅವರ ಊರಿನವರೆ ಆದ ಸಾತು ಗೌಡ ಬಡಗೇರಿ ಅವರು ಗುಣವನ್ನು ಗೌರವಿಸುವ ಕವಿ. ಅವರ " ಜೈ ಹೋ ಭಾರತ" ಕವಿತೆ ನಿಮ್ಮ ಓದಿಗಾಗಿ. ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ ಅಂಕೋಲಾ.

ಜೈ ಹೋ ಭಾರತ

©Alochane.com 

bottom of page