ಜೀವನವೇ ಚರಿತ್ರೆಯಾಗಲಿ:
ಸರಳತೆಯೇ ಆಭರಣ ಮಾತು ರಸದೌತಣ ಹೊಸತ ಹುಡುಕು ಅನುದಿನ ಸಜ್ಜನಿಕೆಯೇ ಜೀವನ. ಮಾನವತೆಯೇ ಮಾಣಿಕ್ಯ ಜ್ಞಾನದಲ್ಲಿ ಚಾಣಾಕ್ಯ ಸೌಮ್ಯತೆಯಲಿರು ಅನುದಿನ ಅಳುಕದಿರು ಹೇ ಮನ. ಚಿಂತನೆಯಲಿ ನೀ ಇರು ಆಲೋಚನೆಗೆ ಅಂಜದಿರು ಸಮಚಿತ್ತವಾಗು ಅನುದಿನ ಚಂಚಲೆಯಾಗದಿರಲಿ ಮನ. ಸುಳ್ಳಿನಿಂದ ದೂರ ಸರಿ ಸತ್ಯದ ಹಾದಿ ಹಿಡಿದು ನಡಿ ಪವಿತ್ರವಾಗು ಅನುದಿನ ಚರಿತ್ರೆಯಾಗಲಿ ಜೀವನ. -ಮಹೇಶ್ ಹೆಗಡೆ ಮಾಳ್ಕೋಡ್. ಉಪನ್ಯಾಸಕರು/ಚಿಂತಕರು ಶ್ರೀ ಮಹೇಶ್ ಹೆಗಡೆ ಮಾಳ್ಕೋಡ್. ಇವರು ಹೊನ್ನಾವರ ತಾಲೂಕಿನ ಮಾಳ್ಕೋಡ್ ಗ್ರಾಮದವರು. ಪ್ರಸ್ತುತ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಹಿಂದಿ ಉಪನ್ಯಾಸಕರಾಗಿ ಹಾಗೂ ಬ್ರಿಲಿಯಂಟ್ ಎಜ್ಯುಕೇಶನ್ ಟ್ರಸ್ಟ್,ಹೊನ್ನಾವರ ಇದರ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿತ್ತಿದ್ದಾರೆ. ಸಾವಿರಕ್ಕೂ ಹೆಚ್ಚು ನುಡಿಮುತ್ತುಗಳನ್ನು 'ಸುಜ್ಞಾನಾಮೃತ' ಎಂಬ ಹೆಸರಿನಲ್ಲಿ ಬರೆದಿರುವ ಇವರು ಕವನ ರಚನೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜೊತೆಗೆ ಶೈಕ್ಷಣಿಕ ಮತ್ತು ಸಾರ್ವಜನಿಕ ಚಟುವಟಿಕೆಗಳಲ್ಲೂ ಕ್ರಿಯಾಶೀಲರಾಗಿದ್ದಾರೆ ಚಿಂತಕರು,ವಾಗ್ಮಿಗಳು ಆಗಿರುವ ಇವರ ಮಾತುಗಳು ಯೂಟ್ಯೂಬ್ ಮತ್ತು ಪೇಸ್ ಬುಕ್ ನಲ್ಲಿ ಲಭ್ಯವಿವೆ. -ಸಂಪಾದ