top of page

ಕೋರಿಕೆ
ಹೇಳಿದಿರಿ ಎಲ್ಲ - ಹೆಣ್ಣಲ್ಲ ಅವಳು ಅದ್ವಿತೀಯ ಚೇತನ - ಮಹಿಳಾ ಶಕ್ತಿ!! ಅನಾದಿಕಾಲದಿಂದ ಇಲ್ಲಿಯವರೆಗೂ ಸಾಬೀತಾಗಿದೆ ಅವಳ ಸಾಮರ್ಥ್ಯ - ಶಕ್ತಿ!! ಉದಾರತೆಯಿಂದ ಹುರಿದುಂಬಿಸಿ ಮುನ್ನಡೆಸಿ, ಅರಿತು ಆಕೆಯ ಆಸಕ್ತಿ!! ಸಹನಶೀಲೆ - ಭಾವನಾ ಜೀವಿ, ನವ ಪೀಳಿಗೆಯ ಸೃಷ್ಟಿಕರ್ತೆ, ತೋರಿಸಿ - ನಿಮ್ಮೆಲ್ಲರ ಪ್ರೀತಿ -ಭಕ್ತಿ!! ಮೋಸ -ವಂಚನೆ - ಅತ್ಯಾಚಾರ ಅನ್ಯಾಯಗಳಿಗೆ ಇತಿಶ್ರೀ ಹಾಡಿ! ಅಸೂಯೆ ಪಡದೆ - ಶುಭ ಕೋರಿ ಸಹಕರಿಸಿ - ಗೌರವವ ನೀಡಿ!! ಇಂದು ವಿಶ್ವದ ಉದ್ದಗಲಕೂ ಮಹಿಳಾ ದಿನಾಚರಣೆಯ ಸಡಗರ - ಸಂಭ್ರಮ!!!!! ಇದು ಅಹಂಕಾರವಲ್ಲ....!! ಪ್ರತಿಭೆ - ಪರಿಶ್ರಮದ ಗೆಲುವು! ಇರಲಿ ಪ್ರತಿಕ್ಷಣ - ಅನುದಿನ!!! ಪ್ರಶಸ್ತಿ -ಸನ್ಮಾನ -ಪಾರಿತೋಷಕಗಳು ಗುರುತಿಸುವಿಕೆಯ ಸಂಕೇತ! ಶ್ಲಾಘನೀಯ ಕಾರ್ಯವಿದು ನಡೆಯುತಿರಲಿ ಸತತ !!!!!! ಸಾವಿತ್ರಿ ಶಾಸ್ತ್ರಿ, ಶಿರಸಿ
bottom of page