top of page

ಕೊನೆ ಪುಟದಲ್ಲಿ ಗೀಚಿದ್ದು

ಬೇಗ ನೆನಪಾಗಬಹುದೆಂದು ಎಲ್ಲಾ  ಮೊದಲುಗಳನ್ನ ಕೊನೆ ಪುಟದಲ್ಲಿ ಬರೆಯುವ  ಗೀಳು.ಹುಡುಕಿದರೆ ಸಿಗಬಹುದು ಅಪೂರ್ಣ  ಭಾವಪೂರ ಕವಿತೆಗಳು,ಎಲ್ಲೋ ಓದಿ ಮನಸಿಗೆ  ನಾಟಿದ ಉಕ್ತಿಗಳು, ನೆನಪಿಸಿಕೊಂಡು  ಕಂಠಪಾಠ ಮಾಡಿದ ಸ್ವರಗಳ ಮಿಳಿತಗಳನು, ಅನೇಕ ಸಲ ಮಾಡಿದ ತನ್ನದೇ ರುಜುಗಳನು, ಜನ್ಮ ನಾಮ ನಕ್ಷತ್ರಗಳ ಪುರವಣಿಗಳನು, ಆತ್ಮೀಯರ ನೆನೆದು ಅರ್ಧ ಬರೆದು  ಮುಂದುವರಿಸಲಾಗದೆ ನಿಲ್ಲಿಸಿದ ಹಲವಾರು  ಕವಿತೆಗಳ,ಅತಿಯಾಗಿ ಕಾಡುವ  ಭಾವಗೀತೆಗಳ ಮರೆಯಲಾಗದಕ್ಕೆ. ಕಥೆಗೆ ಕವಿತೆಗಳಿಗೆ ಓದುವಾಗ ಸಿಕ್ಕ ಒಳ್ಳೆ ಶೀರ್ಷಿಕೆಗಳನು, ಕಡೆಯದಾಗಿ ಕಲಿಯಲೊರಟ ಇಷ್ಟದ ಭಾಷಾ ಪ್ರಯೋಗಗಳನು,ಸಂಪರ್ಕಕ್ಕೆ ಬರುವಂತೆಯೂ  ಬಾರದಂತೆಯು ತೋರುವ ಕೆಲವಾರು ವಿಳಾಸಗಳನು. ಲಕ್ಷ್ಮೀ ದಾವಣಗೆರೆ

ಕೊನೆ ಪುಟದಲ್ಲಿ ಗೀಚಿದ್ದು
bottom of page