top of page

ಕಂದು ಹುಡುಗಿಯ ಕನಸು ಕಾವ್ಯ

(ಅಮೇರಿಕಾದ ಹೆಸರಾಂತ ಲೇಖಕಿ ಜಾಕಲೀನ್ ಉಡ್ಸನ್ ಅವರಿಗೆ ಇದೇ ವರುಷ ಮಕ್ಕಳ ಸಾಹಿತ್ಯದ ಅಂತರರಾಷ್ಟ್ರೀಯ ಪ್ರಿತಿಷ್ಠಿತ ಹ್ಯಾನ್ಸ್ ಕ್ರಿಷ್ಚಿಯನ್ಆ್ಯಂಡರ್‍ಸನ್ ಪುರಸ್ಕಾರ ಬಂದಿದೆ. ಈ ಸಂದರ್ಭಕ್ಕೆ ಸರಿಯಾಗಬಹುದೆಂದು ಅವರ ಆತ್ಮಕಥನಾತ್ಮಕ, ಬಾಲ್ಯದ ನೆನಪುಗಳನ್ನಹಿಡಿದಿಟಿರುವ ‘Brown girl dreaming’ ಎನ್ನುವ ಕಾವ್ಯದ ವಿಶೇಷತೆಗಳನ್ನ ಕನ್ನಡದವರಿಗೆ ಮುಟ್ಟಿಸುವಲ್ಲಿ ಇದೊಂದು ಪ್ರಯತ್ನ. ಅಮೇರಿಕಾದ ಈಚಿನ ಕೆಲ ವಿದ್ಯಮಾನಗಳ ಸಂದರ್ಭದಲ್ಲೂ ಈ ಕಾವ್ಯ, ಈ ಲೇಖಕಿಯ ಕುರಿತು ಮಾತುಕತೆ ವಿಶೇಷದ್ದು ಎನ್ನುವುದನ್ನೂ ಇಲ್ಲಿ ಹೇಳಬಹುದು.) ‘Brown girl dreaming’ ಎನ್ನುವದು ಒಂದು ಅಪರೂಪದ ಬಾಲ್ಯಗಾಥೆ. ಅಮೇರಿಕದಂಥ ಪರಿಸರದಲ್ಲಿ ಕಪ್ಪು ಹುಡುಗಿಯ ಕನಸು ಕಾವ್ಯಇದು(ಕನ್ನಡದವನಾಗಿ, ದೂರದ ದೇಶದಲ್ಲಿದ್ದುಕೊಂಡು ಕಪ್ಪು ಹುಡುಗಿಯೆಂದುಬಿಟ್ಟೆ, ಅದು ನಮಗೆಲ್ಲ ರೂಢಿಯಾಗಿಬಿಟ್ಟಿದೆ, ಆದರೆ ಜಾಕ್‍ಲೀನ್ Brown ಅಂತಲೇ ಬರೆದಿರುವುದರಿಂದ ಕಂದು ಹುಡುಗಿ ಎನ್ನುವುದೇ ಸರಿಯಾದ್ದು ಅನಿಸಿದೆ.). ಜಾಕ್‍ಲೀನ್ ಉಡ್ಸನ್(‘Jacqueline Woodson’) ಚುರುಕಿನ, ತೀವ್ರ ಸಂವೇದನೆಯ ಹುಡುಗಿ, ತನ್ನಸುತ್ತೆಲ್ಲವನ್ನ ಬೆರಗು ಕಣ್ಣಿಂದ ನೋಡುತ್ತ, ಹಾಗೆಯೇ ಹಲವಾರು ಪ್ರಶ್ನೆಗಳನ್ನ ಹುಟ್ಟುಹಾಕಿಕೊಳ್ಳುತ್ತಲೇ ತನ್ನೊಳಗೆ ಗೊಂದಲ ಕಾಣುತ್ತ ಉತ್ತರಗಳಿಗಾಗಿ ಹಂಬಲಿಸುತ್ತ ಬೆಳೆದ ಹುಡುಗಿ, ಅವಳ ಕಣ್ಣು ಬಲು ಚುರುಕಿನವು, ಹಾಗೆಯೇ ಪ್ರಕೃತಿಯ ತೀರ ಸಹಜದ ವಿಸ್ಮಯ ತುಂಬಿದ ಬಗೆಗಳು. ಅದಕ್ಕೇ ಅವಳಿಗೆ ತನಗೆ ಕಂಡುದನ್ನೆಲ್ಲ ಬರೆಯಬೇಕು ಅಂತ ಅನಿಸಿತು, ಎಲ್ಲವನ್ನೂ ಹಾಳೆಗಿಳಿಸುವ ತವಕ ಕಾಡಿತು. ‘I am born’ ಎನ್ನುವ ಮೊದಲ ಅಧ್ಯಾಯ, ಅಥವಾ ಕವಿತೆಯಿಂದ ಹಿಡಿದು ‘Ready to change the world’ ಎನ್ನುವ ಕೊನೆಯ ಅಧ್ಯಾಯದ ವೆರೆಗೆ ಅದು ಬಲು ನಿಡಿದಾಗಿ ಭರವಸೆಯನ್ನೇ ಉಸಿರಾಡುತ್ತ, ಅದಕ್ಕಾಗಿಯೇ ಹಂಬಲಿಸುತ್ತ, ಅದೇ ಕನಸುಗಳನ್ನ ಕಟ್ಟಿಕೊಳ್ಳುತ್ತ 320 ಪುಟಗಳಷ್ಟು ಹರಿದು ಒಂದು ಮುಕ್ತಾಯವನ್ನು ಕಂಡಿದೆ ! Every dandelion blown Each Star light, star bright, The first star I see tonight. My wish is always the same. Every fallen eyelash And first firefly of summer . . . The dream remains. What did you wish for ? To be writer. Every heads-up penny found And daydream and night dream And even when people say it’s a pipe dream . . . ! I want to be a writer. Every sunrise and sunset and song Against a cold windowpane. ಒಂದೊಂದು ಡ್ಯಾಂಡಲೀನ್ ಅರಳರಳುತ್ತ ಒಂದೊಂದು ಚುಕ್ಕೆ ಬೆಳ್ಳಗಾಗುತ್ತ, ಬೆಳ್ಳಬೆಳ್ಳಗಾಗುತ್ತ ಆ ಮೊಟ್ಟ ಮೊದಲ ಚುಕ್ಕೆಯನ್ನ ಈ ಇರುಳು ನಾ ನೋಡುತ್ತ ನನಗದೇ ಅದೇ ಕನವರಿಕೆ . . . ಕಣ್ಣೆವೆ ಮುಚ್ಚಿಕೊಳ್ಳುತ್ತ ಮುಚ್ಚಿಕೊಳ್ಳುತ್ತ ಬೇಸಗೆಯ ಮೊದಲಲ್ಲಿ ಕಂಡುಬಡುವ ದೀಪದ ಹುಳು ಕಾಣುತ್ತ . . . ಕನವರಿಕೆ ಅದೇ ಅದೇ ನೀನೇನನ್ನ ಬಯಸುತ್ತೀ ? ಹೌದು ಬರೆಯುವವಳೇ ಆಗುವುದು ನಾನು, ಪ್ರತಿಸಲ ನಾಣ್ಯ ಉರುಳಿ ಮುಖ ಮೇಲಾದಾಗಲೂ ದಿನದ ಕನಸೂ, ರಾತ್ರಿ ಕಾಣಿಸಿಕೊಳ್ಳುವ ಕನಸೂ ಜನ ಅಂದುಕೊಳ್ಳುತ್ತಾರೆ ಅಹ, ಅದು ಬಾಲದ ಹಾಗೆ ಉದ್ದೊಉದ್ದ ಹರಿಯುತ್ತಲೇ ಇರೋದು! ಹೌದು, ನಾನು ಅದೇ, ಬರೆಯುವವಳಾಗುವುದೇ ಪ್ರತಿ ಬೆಳಗೂ, ಪ್ರತಿ ಕೆಂಪಿಳಿವ ರಾತ್ರಿಯೂ, ಅದೇ ಹಾಡು ಚಳಿಗಾಲದ ಮುಚ್ಚಿದ ತಣ್ಣನೆಯ ಕಿಟಕಿ ಗಾಜಿನಗುಂಟ ಹರಿಯುವುದು ಅದೇ ಅದೇ ಜಾಕ್‍ಲೀನ್ ಅಮೇರಿಕಾದ ಹೆಸರುವಾಸಿ ಮಕ್ಕಳ ಲೇಖಕಿ. 2015ನೆ ವರ್ಷದ ಪ್ರತಿಷ್ಠಿತ ನ್ಯೂಬೆರ್ರಿ ಪುರಸ್ಕಾರವನ್ನ ‘Brown girl dreaming’ ಕೃತಿಗೇ ಅವರು ಪಡೆದಿದ್ದಾರೆ(ಈ ಪುರಸ್ಕಾರವನ್ನ ಭಾರತೀಯ ಮೂಲದ ಧನಗೋಪಾಲ ಮುಖರ್ಜಿ ಅವರು ಕೂಡ ಪಡೆದಿರುವುದನ್ನ ಇಲ್ಲಿ ಸ್ಮರಿಸಬಹುದು). ‘National Book Award’ನ್ನೂ ಈ ಕೃತಿಗೆ ಅವರು ಪಡೆದಿದ್ದಾರೆ. ಹೀಗೆಯೇ ತಮ್ಮ ಇತರ ಕೃತಿಗಳಿಗೆ ಹಲವಾರು ಪುರಸ್ಕರಗಳನ್ನ ಈಗಾಗಲೇ ಪಡೆದಿರುವ ಜಾಕ್‍ಲೀನ್‍ರ ಈ ಕೃತಿ ಅಮೇರಿಕದ ಬಿಳಿಯರ ಪರಿಸರದಲ್ಲಿ ಬೆಳೆದು ಬಂದ ಆಫ್ರಿಕಾ ಮೂಲದ ಹುಡುಗಿಯ ಸೂಕ್ಷ್ಮದ ಹೆಜ್ಜೆಗಳನ್ನ ಭಾವಪೂರ್ಣವಾಗಿ ಮುಂದಿಡುತ್ತ ಹೋಗಿರುವ ಕಾವ್ಯ. ಹಾಗೆ ನೋಡಿದರೆ ತನ್ನ ಸುತ್ತಲಿನ ವಿದ್ಯಮಾನಗಳಿಗೂ ಸಂಬಂಧಗಳನ್ನ ಕಲ್ಪಸಿಕೊಳ್ಳುತ್ತ, ಇತಿಹಾಸದ ಪುಟಗಳಿಗೂ ತಾಗಿಕೊಳ್ಳುತ್ತ, ಕುಟುಂಬ, ಶಾಲೆ, ಬೀದಿ, ಪೇಟೆ ಎಲ್ಲಕಡೆಗೆ ಹರಿದಾಡುವ ವರ್ತಮಾನವೂ ಆಗುತ್ತ ಇಲ್ಲಿನ ಬಾಲ್ಯದ ಕಣ್ಣು ನೋಟ ಹರಿದಿದೆ. ಇದೊಂದು ಬಗೆಯಲ್ಲಿ ಆಟೋಬಯಾಗ್ರಫಿ ಅಂದರೂ ಆದೀತು. ಆದರೆ ಅಷ್ಟಕ್ಕೇ ಅದು ನಿಲ್ಲುವುದಿಲ್ಲ, ಕವಿತೆಯಾಗಿ ನಮ್ಮೊಳಗೆ ಹರಿಯುತ್ತ ಏನೆಲ್ಲವನ್ನ ಒಳಗು ಮಾಡಿಕೊಳ್ಳುತ್ತ ಹೋಗುತ್ತದೆ. ನಾನಿಲ್ಲಿ ಸುಮ್ಮನೆ ಕಣ್ಣಾಡಿಸುತ್ತ ಕೆಲ ಪುಟಗಳಲ್ಲಿನ ಸಾಲುಗಳನ್ನ ಮುಂದಿರಿಸುತ್ತ ಹೋಗಿರುವೆ. ಈ ಸಂಚಿಕೆಗೆ ಕುತೂಹಲದ ಇದೊಂದಿಷ್ಟು ನೋಟ ಸಾಕು ಅಂತ ನನಗನಿಸಿದೆ. ಜೊತೆಗೆ ನನಗೆ ಸದ್ಯಕ್ಕೆ ಸಾಧ್ಯವಾಗಿರುವ ಕನ್ನಡದಲ್ಲಿಯೂ ಇಡಲು ಪ್ರಯತ್ನಿಸಿರುವೆ. My birth certificate says : Female Negro Mother : Mary Anne Irby, 22 Negro Father : Jack Austin Woodson, 25, Negro In Birmingham, Alabama, Martin Luther King Jr. Is planning a march on Washington,where John F. Kennedy is president. In Harlem, Malcolm X is standing on a soapbox Talking about a revolution. Outside the window of University Hospital, Snow is slowly falling. So much already Covers the vast Ohio ground. In Montgomery, only seven years have passed Since Roas Parks refused To give up Her seat on a city bus. I am born brown-skinned,black-haired And wide-eyed. I am born Negro here and Colored there And somewhere else, The Freedom singers have linked arms, Their protests rising into song : Deep in my heart,I do believe That we shall overcome someday Ohio. The Buckeye State My fingers curl into fists, automatically This is the way, my mother said, Of every baby’s hand. I do not know if these hands will become Malcolm’s – raised and fisted Or Martin’s – open and asking Of James’s – curled around a pen. I do not know if these hands will be Rasa’s Or Ruby’s Gently gloved And fiercely folded Calmly in a lap, On a desk, Around a book, Ready To change the world . . . ನನ್ನ ಬರ್ಥ್ ಸರ್ಟಿಫಿಕೆಟ್ ಹೇಳೋದಿದು : Female Negro Mother : Mary Anne Irby, 22 Negro Father : Jack Austin Woodson, 25, Negro ಬರ್ಮಿಂಗ್ ಹ್ಯಾಮ್‍ನಲ್ಲೀಗ ಮಾರ್ಟಿನ್ ಲೂಥರ್ ಕಿಂಗ್ ಜುನಿಯರ್ ವಾಷಿಂಗಟನ್ ಕಡೆಗೆ ಪ್ರತಿಭಟನೆಯ ಹೆಜ್ಜೆ ಹಾಕುತ್ತಿರುವುದು, ಅಲ್ಲೀಗ ಜಾನ್ ಎಫ್ ಕೆನಡಿ ಪ್ರೆಸಿಡೆಂಟ್, ಹರ್ಲೆಮ್‍ನಲ್ಲಿ ಮಾಲ್ಕೋಲಮ್ ಎಕ್ಸ್‍ನ ಚಳುವಳಿಯ ತುರುಸಿನ ಹೊಳಹು ಯುನಿವರ್ಸಿಟಿ ಹಾಸ್ಪಿಟಲ್‍ನ ಕಿಟಕಿಯ ಗಾಜಿನ ಆಚೆ ಹಿಮ ಇಳಿಯುತ್ತಿದೆ, ಎಷ್ಟೊಂದು ಆಗಲೆ, ಓಹಿಯೊ ಬಯಲೆಲ್ಲ ತುಂಬಿಕೊಂಡುಬಿಡುತ್ತದೆ ಮಾಂಟ್ಗೊಮೆರಿಯಲ್ಲಿ ಸಿಟಿ ಬಸ್ಸಿನಲಿ ರಾವೋಸ್ ಪಾಕ್ರ್ಸ್(Roas Parks ) ತನ್ನ ಸೀಟು ಬಿಟ್ಟುಕೊಡಲು ನಿರಾಕರಿಸಿ ಈಗ ಏಳು ವರ್ಷಗಳಷ್ಟೆ ಕಳೆದುದು ನಾನು ಕಂದು ಮೈಯಲ್ಲಿ, ಕಪ್ಪುಕೂದಲಿನಲ್ಲಿ, ವಿಶಾಲ ಅರಳಿದ ಕಣ್ಣುಗಳಲ್ಲಿ ಹುಟ್ಟು ಪಡೆದಿದ್ದೇನೆ ನಿಗ್ರೊ ಆಗಿ ನನ್ನ ಹುಟ್ಟು, ಆಚೆ ಬಣ್ಣ ಬಣ್ಣದ ಜಗತ್ತು ಸ್ವಾತಂತ್ರದ ಹಾಡುಗಾರರ ಕೊರಳಿಲ್ಲಿ ಆಯುಧದ ಹರಿತ ಈಗ ಅವರ ದನಿ ಏರುತ್ತಿದೆ : ‘ಆಳ ಎದೆಯೊಳಗಿಲ್ಲಿ, ಗಟ್ಟಿ ದನಿ ಇದೆ, ಒಂದಿಲ್ಲ ಒಂದಿನ ಗೆಲುವು ನಮಗಿದ್ದೇ ಇದೆ’ ಓಹಿಯೊ ಒಂದು ಬಕಿರಾಜ್ಯ(ಬಕಿ ಮರಗಳಿಂದ ಹೆಸರು ಬಂದುದು) ನನ್ನ ಪುಟ್ಟ ಕೈಗಳಲ್ಲಿ ಬೆರಳುಗಳು ಮುದುರಿಕೊಳ್ಳುತ್ತವೆ, ಎಲ್ಲ ಮಗುಗಳದೂ ಹೀಗೇ, ಅಮ್ಮ ಹೇಳುತ್ತಾಳೆ, ನನಗೇನು ಗೊತ್ತೀಗ . . . ಮಾಲ್ಕೋಲಮ್‍ನ ಎತ್ತಿದ, ಅಮುಕಿದ ಕೈಗಳಾಗುತ್ತವೆಯಾ ಇವು . . . ಇಲ್ಲವೆ ಮಾರ್ಟಿನ್‍ನ ತೆರೆದ, ಕೇಳುವ ಕೈಗಳಾಗುತ್ತವೆಯಾ ಇವು ಇಲ್ಲಾ . . . ಪೆನ್ನಿನ ಸುತ್ತ ಹರಡಿಕೊಳ್ಳುವ ಜೇಮ್ಸ್‍ನ(ಜೇಮ್ಸ್ ಬಾಲ್ಡವಿನ್) ಕೈಗಳಾಗುತ್ತವೆಯಾ ಇವು . . . ನನಗೆ ತಿಳಿಯದು ರಸಾ, ಇಲ್ಲವೆ ರೂಬಿ ಯಾರವಾಗುತ್ತವೋ ಇವು ತಣ್ಣಗೆ ಹೊಳೆಯುತ್ತ, ಬಿರುಸಾಗಿ ಅಮುಕಿಕೊಳ್ಳುತ್ತ ತಣ್ಣಗೆ ಲ್ಯಾಪ್ ಮುಂದೆ, ಡೆಸ್ಕಿನ ಮೇಲೆ, ಇಲ್ಲವೆ ಪುಸ್ತಕದ ಸುತ್ತ ಜಗತ್ತನ್ನೇ ಬದಲಿಸಲು ಹವಣಿಸುತ್ತ Deep winter and the night air is cold. So still, It feels like the world goes on forever in the darkness Until you look up and the earth stops In a ceiling of stars. My head against My grandfather’s arm, A blanket around us as we sit on the front porch swing. Its whine like a song. You don’t need words On a night like this. Just the warmth Of your grandfather’s arm. Just the silent promise That the world as we know it Will always be here. ಕಡು ಚಳಿ, ರಾತ್ರಿ ತಣ್ಣಗೆ, ಎಲ್ಲ ನಿಲುಗಡೆ, ಈ ವಿಶ್ವ ಈ ಕತ್ತಲೆಯಲ್ಲಿ ಹೀಗೇ ಸಾಗಿ ಹೋಗಿಬಿಡುತ್ತದೆ ಎನಿಸಿಬಿಡುತ್ತದೆ, ಆದರೆ ತಲೆ ಎತ್ತಿ ಮೇಲೆ ನೋಡುವವರೆಗೆ ಅದು, ಭೂಮಿ ನಿಂತಹಾಗೇ, ಆ ಚುಕ್ಕೆ ತುಂಬಿದ ಆವಾರದಲ್ಲಿ, ಅಜ್ಜನ ತೋಳಿಗಾನಿಸಿಕೊಂಡು, ಬೆಚ್ಚನೆ ರಗ್ಗಿನೊಳಗೆ ಅವಿತು, ಅಂಗಳದ ತುಗುಯ್ಯಾಲೆಯಲ್ಲಿ ತೂಗುವಾಗ ಆ ಕಿರು ಕಿರ್ ಕಿರ್ ಒಂದು ಹಾಡಿನಂತೆಯೇ ಇಂಥ ಇರುಳಿನಲ್ಲಿ ಯಾವ ಮಾತೂ ಬೇಡ, ಸಾಕು ಅಜ್ಜನ ತೋಳ ಬೆಚ್ಚನೆಯ ಆಸರೆ, ನಿಶಃಬ್ದ ಭರವಸೆ ಈ ಜಗತ್ತು ಇರುತ್ತದೆ ಹಾಗೇ ಹಾಗೇ Even though the laws have changed My grandmother still takes us To the back of the bus when we go downtown In the rain. It’s easier, my grandmother says, Than having white folks look at me like I’m dirt. But we aren’t dirt. We are people Paying the same fare as other people. When I say this to my grandmother, She nods, says,Easier to stay where you belong. I look around and see the ones Who walk straight to the back. See The ones who take a seat up front, daring Anyone to make them move. And know This is who I want to be. Not scared Like that, Brave Like that. Still, my grandmother takes my hand downtown Pulls me right past the restaurants that have to let us sit Wherever we want now. No need in making trouble, She says. You all go back to New York city but I have to live here. We walk straight past Woolworth's Without even looking in the windows Because the one time my grandmother went inside They made her wait and wait. Acted like I wasn’t even there. It’s hard not to see the moment – My grandmother in her Sunday clothes, a hat With a flower pinned to it Neatly on her head, her patent – leather purse, Perfectly clasped Between her gloved hands – waiting quietly Long past her turn. ಕಾನೂನುಗಳೆಲ್ಲ ಬದಲಾದವು ಈಗ, ಹಾಗಿದ್ದರೂ ಶಹರಕ್ಕೆ, ಮಳೆಬರುವಾಗ, ನಮ್ಮಜ್ಜಿ ಬಸ್ಸಿನಲ್ಲಿ ಹಿಂದಿನ ಸೀಟಿಗೇ ಕರೆದುಕೊಂಡುಹೋಗುವುದು ನಮ್ಮನ್ನು, ಆ ಬಿಳಿಯರು ಸಿಂಡರಿಸಿ ಹೊಲಸೆಂದು ನೋಡುವುದಕ್ಕಿಂತ ಇದು ಒಳ್ಳೆಯದು, ಅನುಕೂಲದ್ದು. ಆದರೆ ನಾವು ಹೊಲಸಲ್ಲ, ನಾವೂ ಜನವೇ, ಬಸ್ಸಿನಲ್ಲಿ ಅದೇ ದುಡ್ಡು ಕೊಡುವುದು ನಾವು, ಅಜ್ಜಿಗೆ ಹೇಳುತ್ತೇನೆ ನಾನಿದನ್ನು ಊಂ ಹೂಂ ಅವಳು ಒಪ್ಪುವುದಿಲ್ಲ, ‘ಇಲ್ಲಿರುವುದೆ ಸುಖ, ನಾವಿರುವ ಹಾಗೇ’ ನಾನು ನೋಡುತ್ತಲೆ ಇರುತ್ತೇನೆ, ನೇರ ಹಿಂದಿನ ಸೀಟಿಗೇ ಕೆಲವರೆಲ್ಲ ನಡೆದುಬಿಡುವವರೇ, ಕೆಲವರು ಬೇಕೂ ಅಂತಲೇ ಮುಂದಿನ ಸೀಟಿಗೆ ಸಾಗಿಬಿಡುವವರು, ನೋಡೋಣ ಯಾರವರು ? ನಮ್ಮನ್ನು ತಡೆಯುವವರು ಎಂದು, ಹೌದು, ನಾನೂ ಹೀಗೆಯೇ ಒಬ್ಬಳಾಗಬೇಕಿರುವುದು, ಅಂಜುಕುಳಿಯಲ್ಲ, ಎದೆಗಾತಿ ಹೌದು ಈಗಲೂ ಅಜ್ಜಿ ನನ್ನ ಕೈ ಹಿಡಿದುಕೊಂಡು ಎಳೆದುಕೊಂಡು ಆ ರೆಸ್ಟೊರೆಂಟುಗಳ ಹತ್ತಿರವೇ ಹೋಗುವುದು, ಎಲ್ಲಿ ನಮಗೆ ಕೂಡಲು ಅನಕೂಲ, ಯಾವ ರಾದ್ಧಾಂತ ತಂದುಕೊಳ್ಳುವುದು ಬೇಡ, ಅವಳೆನ್ನುವುದು ಹಾಗೇ, ‘ನೀವೆಲ್ಲ ನ್ಯುಯಾರ್ಕ್ ಸಿಟಿಗೆ ಹೋಗಿಬಿಡುತ್ತೀರಿ, ಇಲ್ಲಿ ಉಳಿವವಳು ನಾನೊಬ್ಬಳೇ’ Woolworth ಹತ್ತಿರ ಹೋಗುವಾಗ ಗಾಜಿನಿಂದ ಇಣುಕಿ ಸಹ ನೋಡದೆ ನಾವು ಸಾಗಿಬಿಡುವುದೇ, ಒಮ್ಮೆ ಅಜ್ಜಿ ಅಲ್ಲಿ ಒಳಹೊಕ್ಕು ಕಾದು ಕಾದು ಕಾದು . . . ‘ನಾನಲ್ಲಿರಲಿಲ್ಲವೇ ಇಲ್ಲ ಅವರೆದುರಿಗೆ’ ಹಾಗಿತ್ತಂತೆ ಅಲ್ಲಿ, ನಮ್ಮಜ್ಜಿ, ಭಾನುವಾರದ ಅವಳುಡುಗೆಯಲ್ಲಿ ತಲೆಗೊಂದು ಹ್ಯಾಟು, ಅದಕೊಂದು ಹೂ ಕುಚ್ಚು, ತಲೆಮೇಲೆ ಚೊಕ್ಕಚೊಕ್ಕಾಗಿ ಕುಳಿತ ಅದು, ಗ್ಲೌಸಿನ ಕೈಗಳಲ್ಲಿ ಪಕ್ಕಾ ಹೊಂದಿಕೊಂಡ ಅವಳ ಪೇಟೆಂಟ್ ಲೆದರ್ ಪರ್ಸ್, ಕಾದಳು ಕಾದಳು ಕಾದಳು ಎನ್ನುವುದೇ ಅಸಾಧ್ಯದ್ದು You’re a writer, Ms. Vivo says, Her gray eyes bright behind Thin wire frames. Her smile bigger than anything So I smile back, happy to hear these words From a teacher’s mouth. She is a feminist, she tells us And thirty fifth – grade hands bend into yet another World to us. Ms Vivo pauses, watches our fingers fly Webster’s has our answers. Equal rights, a boy named Andrew yells out. For Women. My hands freeze on the thin white pages. Like Blacks, Ms Vivo, too, is part of a revolution. But right now, that revolution is so far away from me. This moment, this here,this right now is my teacher Saying, You’re a writer, as she holds the poem I am just beginning. The first four lines,stolen From my sister : Black brothers, Black sisters, all of them were great No fear no fright but a willingness to fight . . . Yo can have them, Dell said when she saw. I don’t want to be a poet. And then my own pencil moving late into the evening : In big fine houses lived the whites In little old shacks lived the blacks But the blacks were smart In fear they took no part. One of them was Martin With a heart of gold You’re a writer, Ms. Vivo says, holding my poem out to me. And standing in front of the class Taking my poem from her My voice shakes as I recite the first line : Black brothers, Black sisters,all of them were great . . . But my vice grows stronger with each word because More than anything else in the world, I want to believe her. ‘ನೀನು ಕವಯತ್ರಿ’ ಮಿಸ್ ವಿವೊ ಅನ್ನತ್ತಾರೆ, ಅವರ ತೆಳು ಫ್ರೇಮಿನ ಕನ್ನಡಕದೊಳಗೆ ಬಿಳಿ ಬಿಳಿ ಕಣ್ಣಗಳು ಮಿನುಗುತ್ತವೆ, ತುಟಿಗಳು ಅಗಲವಾಗಿ ಚಾಚಿಕೊಳ್ಳುತ್ತವೆ, ದೊಡ್ಡದು ಆ ನಗೆ, ನಾನೂ ನಗುತ್ತೇನೆ, ಟೀಚರ್ ಹೀಗೆ ಹೇಳಿದ ಮೇಲೆ ಇನ್ನೇನು, ಇವಳೊಬ್ಬ ಫೆಮಿನಿಸ್ಟ್, ಅನ್ನುತ್ತಾರೆ ಅವರು, ಥರ್ಡ್ ಗ್ರೇಡಿನ ಎಲ್ಲ ವೆಬ್ಸ್‍ಸ್ಟರ್ಸ್ ನಿಘಂಟಿನ ಪುಟಗಳಲ್ಲಿ ಬೆರಳಾಡಿಸುತ್ತವೆ ಹುಡುಕುತ್ತ ಶಬ್ದ, ಅರ್ಥ ಆ್ಯಂಡ್ರ್ಯೂ ಅನ್ನೋ ಹುಡುಗ ಹುಡುಕುತ್ತಾನೆ, Equal rights ಅಂತ, ಮುಂದುವರೆಸುತ್ತಾನೆ for women ಅಂತ ಡಿಕ್ಷನರಿಯ ಬಿಳಿಯ ಹಾಳೆಗಳಲ್ಲಿ ನನ್ನ ಕೈಗಳು ಮರಗಟ್ಟಿಹೋಗುತ್ತವೆ, ಮಿಸ್ ವಿವೊ ಕೂಡ ಭಾಗಿ ಹೋರಾಟದಲ್ಲಿ ! ಆದರೆ ಆ ಹೋರಾಟ ನನಗಿನ್ನೂ ದೂರ ದೂರ, ಈಗಿದು ಸದ್ಯ, ಈ ಕ್ಷಣದ್ದು ಇಷ್ಟು, ನನ್ನ ಟೀಚರ್ ‘ನೀನು ಕವಯಿತ್ರಿ’ ಎನ್ನುತ್ತಿದ್ದಾರೆ, ನನ್ನ ಸಾಲುಗಳನ್ನ ನನ್ನ ಮುಂದೆ ಹಿಡಿದು, ನಾನವನ್ನ ಎಲ್ಲರೆದುರಿಗೆ ವಾಚಿಸಬೇಕು, ಆದರೆ ಆ ನಾಲ್ಕು ಮೊದಲ ಸಾಲುಗಳು ನಾನು ಕದ್ದಿದ್ದು, ನನ್ನ ಸಹೋದರಿ ಡೆಲ್‍ಳಿಂದ ಃ ಕಪ್ಪು ಸಹೋದರರು, ಕಪ್ಪು ಸಹೋದರಿಯರು, ಎಲ್ಲ ಎಲ್ಲ ದೊಡ್ಡವರೆ ಯಾವ ಭಯವಿಲ್ಲ, ಯಾವುದೇ ಆತಂಕವಿಲ್ಲ, ಹೋರಾಟಕ್ಕೆ ಒಮ್ಮತವೊಂದೆ ಸಹೋದರಿ ಡೆಲ್ ಹೇಳಿದಳು, ನೀನವನ್ನ ತೆಗೆದುಕೊ, ನನಗೆ ಕವಿತೆ ಬರೆಯುವ ಮನಸಿಲ್ಲ, ನಾನು ಕವಯಿತ್ರಿಯಾಗುವುದಿಲ್ಲ ಆ ಸಂಜೆಯೇ ನಾನು ಆ ಸಾಲುಗಳನ್ನ ಮುಂದುವರೆಸಿದೆ ಃ ದೊಡ್ಡ ದೊಡ್ಡ ಇಮಾರತುಗಳಲ್ಲಿ ವಾಸಿಸುವರು ಬಿಳಿಯರು ಇಕ್ಕಟ್ಟು ಜಾಗಗಳಲ್ಲಿ ಆಸರೆಗೊಳ್ಳುವರು ಕರಿಯರು, ಅದರೆ ಅವರು ಕಡಿಮೆಯವರಲ್ಲವೆ ಅಲ್ಲ, ಭಯವೆಂಬುದು ಅವರಿಗಿಲ್ಲವೆ ಇಲ್ಲ, ಮಾರ್ಟಿನ್ ಅವರೊಳಗೊಬ್ಬ ಚಿನ್ನದ ಹೃದಯವೆ ಅವನದು ಅದು . . . ಮಿಸ್ ವಿವೊ ಕವಿತೆ ಓದಲು ಮುಂದೆ ಹಿಡಿದರು, ನಾನು ಕ್ಲಾಸಿನೆಲ್ಲರ ಮುಂದೆ ನನ್ನ ಕವಿತೆ ವಾಚಿಸಲು ಹೊರಟೆ, ಗಂಟಲು ತಡವರಿಸಿತು ಆ ಮದೊಲ ಸಾಲುಗಳೊಂದಿಗೆ . . . ಕಪ್ಪು ಸಹೋದರರು, ಕಪ್ಪು ಸಹೋದರಿಯರು, ಎಲ್ಲ ಎಲ್ಲ ದೊಡ್ಡವರೆ ಆದರೆ ಬರಬರುತ್ತ ನನ್ನ ದನಿ ಗಟ್ಟಿಯಾಗತೊಡಗಿತು, ಹೌದು, ಇನ್ನೆಲ್ಲದರಕಿಂತ ವಿವೊ ಅವರಲ್ಲಿ ಹೌದು, ಅವರಲ್ಲಿ ನನಗೆ ನಂಬಕೆ ಮೂಡತೊಡಗಿತು ! We know our days are counted here. Each evening we wait for the first light Of the last fireflies, catch them in jars Then let them go again. As though we understand Their need for freedom. As though our silent prayers to stay in Greenvelle Will be answered if We do what we know is right. ನನಗ್ಗೊತ್ತು, ಇಲ್ಲಿ ನಮ್ಮ ದಿನಗಳು ಎಣಿಸುತ್ತ ಹೋಗುವಂಥವೇ, ಪ್ರತಿ ಸಂಜೆ ನಾವು ಕಾಯುತ್ತಿರುತ್ತೇವೆ, ಆ ಕೊನೆಯ ಮಿಂಚುಹುಳಗಳ ಮೊದಲ ಬೆಳಕಿಗಾಗಿ, ಅವನ್ನ ಹಿಡಿದು ಜಾಡಿಯಲ್ಲಿ ಇರಸಿಬಿಡುತ್ತೇವೆ ! ನಂತರ ಹಾರಿ ಬಿಡುವುದು, ಅವುಗಳಿಗೂ ಸ್ವಾತಂತ್ರ್ಯ ಬೇಕೆಂಬುದನ್ನ ನಾವು ಬಲ್ಲೆವು ಅನ್ನೋ ಹಾಗೆ ಅದು, ಗ್ರೀನ್‍ವಿಲ್ಲೆಯಲ್ಲಿಯೇ ಉಳಿದುಬಿಡುವ ನಮ್ಮ ಮೌನ ಪ್ರಾರ್ಥನೆಗೆ ಸಿಕ್ಕೇಸುಗುತ್ತದೆ ಒಂದೊಮ್ಮೆ ಗೊತ್ತು, ಸರಿಯಾದುದೆಂದು ಅನಿಸಿದುದನ್ನ ಮಾಡುವುದರಿಂದಲೇ ಅದು ಅಲ್ಲವೆ - ಆನಂದ ಪಾಟೀಲ ಆನಂದ ಪಾಟೀಲ ಅವರು ಬಿರ್ಜು ಎಂಬ ಕಾವ್ಯ ನಾಮದಿಂದ ಚಿರ ಪರಿಚಿತರು.ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಕಾಳಜಿಯಿಂದ ತಮ್ಮನ್ನು ತೊಡಗಿಸಿಕೊಂಡ ಇವರು ಚಿಣ್ಣರ ಬುದ್ದಿ ಭಾವಗಳ ವಿಕಸನಕ್ಕೆ ತಮ್ಮನ್ನೆ ಅರ್ಪಿಸಿಕೊಂಡ ಬದ್ಧತೆಯ ಬರಹಗಾರ.ಮಕ್ಕಳ ಸಾಹಿತ್ಯ ಕುರಿತು ಕವಿತೆ,ಕತೆ,ಕಾದಂಬರಿಯ ಬರವಣಿಗೆಯೊಂದಿಗೆ ಮಕ್ಕಳ ಸಾಹಿತಿಗಳನ್ನು ಒಂದೆಡೆ ಸೇರಿಸಿ ಕೆಲಸ ಮಾಡುತ್ತಿರುವ ಆನಂದ ಪಾಟೀಲರು ಮಕ್ಕಳ ಸಾಹಿತ್ಯ ಕುರಿತು ಪತ್ರಿಕೆಯನ್ನು ಪ್ರಕಟಿಸಿದ ಸಾಹಸಿಗಳು.ಆಕಾಶವಾಣಿಯ ವಿಶ್ರಾಂತ ಅಧಿಕಾರಿಯಾಗಿರುವ ಅವರು ಮಗುಮನದ ಮುಗ್ಧತೆಯನ್ನು ಕಾಪಿಟ್ಟುಕೊಂಡ ಬರಹಗಾರ.ಅವರ ಲೇಖನ ನಿಮ್ಮ ಓದಿಗಾಗಿ. ಸಂಪಾದಕ

ಕಂದು ಹುಡುಗಿಯ ಕನಸು ಕಾವ್ಯ
bottom of page