top of page

ಓ ಮನಸೇ.......

ಓ ಮನಸೇ .... ಹೀಗೆ! ನೀನಿರುವೆ ನಿನ್ನ ಹಾಗೇ!!! ಸುಕೋಮಲ ಹೂವಿನಂತೆ! ಕಠೋರ - ವಜ್ರದಂತೆ!!! ಬೆಳಕಿನ ವೇಗಕ್ಕಿಂತ ಅತಿಶಯವು ನಿನ್ನ ನಡೆ! ವಿಶ್ವಪರ್ಯಟನೆಯ ಪೂರೈಸುವೆ ನೀ ಇರುವೆಡೆ!! ಮರುಗುವೆ ಕೆಲವೊಮ್ಮೆ! ಮುದಗೊಳ್ಳುವೆ ಹಲವೊಮ್ಮೆ!! ಭೂತಕಾಲವ ನೆನಪಿಸಿ! ಭವಿಷ್ಯವ ಯೋಚಿಸಿ!! ವರ್ತಮಾನದೆ ಬದುಕು! ಪ್ರತಿಕ್ಷಣವ ಸಂಭ್ರಮಿಸು! ಅದಲು -ಬದಲು ಆಟ ಬಿಡು! ಸರಳ - ಸಜ್ಜನಿಕೆಯ ಹರಡು!! ಸಾವಿತ್ರಿ ಶಾಸ್ತ್ರಿ, ಶಿರಸಿ

ಓ ಮನಸೇ.......
bottom of page