top of page
ಆಹುತಿ
ದೇಹ ಹಿಂಡಿ
ಹಿಪ್ಪೆಯಾಗಿಸಿದೆ
ಕಾರಿನಲ್ಲಿ ಬಸ್ಸಿನಲ್ಲಿ
ಹಗಲಲ್ಲಿ ನಸುಕಿನಲ್ಲಿ
ಕಾನನದಲ್ಲಿ
ನೀರವ ಅಹನಿಯಲ್ಲಿ ಬೆಳಕು ಸೀಳುವ ಮುನ್ನ
ಬ್ರೇಕಿಂಗ್ ನ್ಯೂಸ್‌ಗಳಿಗೆ
ಆಹಾರ
ಭುವನ ಸುಂದರಿ
ಸ್ಪರ್ಧೆಯಲ್ಲಿ
ದೇಹ ಸೌಂದರ್ಯದ ಬಗ್ಗೆ
ತೀರ್ಪುಗಾರರ
ತಾರೀಪು ಹೆಣ್ಣು ಭ್ರೂ ಣ
ಪತ್ತೆ ಮಾಡುವ
ತವಕದಲ್ಲಿ
ಸ್ಕೆನ್ನಿಂಗ್
ಮಿಷನ್ ಗಳಿಗೆ
ಪುರುಸೊತ್ತಿಲ್ಲ ನದಿಯ ತಟದಲ್ಲಿ
ರೇಲ್ವೆ ಸೇತುವೆಯ
ಕೆಳಗೆ
ಅರೆಬೆಂದ ಶವವಾಗಿ
ಖಾಕಿಗಳಿಗೆ ಮಹಜರು
ಮಾಡಲು.... .. ________________
ಅನಿಲ ಕಾಮತ
ಸಿದ್ದೇಶ್ವರ
bottom of page