top of page
ಆಸೆಯೇ ಸುಖದ ಮೂಲ
ದೀರ್ಘ ರಸ್ತೆಯಲಿ ಹರಡಿಕೊಂಡಿದೆ ಮೌನ ಸಾಮ್ರಾಜ್ಯ ಆಳುವ ದೊರೆಗಳೇ ಇಲ್ಲ; ಅಲ್ಲಲ್ಲಿ ಮಲಗಿಕೊಂಡ ಒಂದೆರಡು ಶ್ವಾನಗಳು, ರಸ್ತೆ ಬದಿಗಳಲ್ಲಿ ಒಗೆದ ಮಾರಾಟವಾಗದ ಕೊಳೆತ ತರಕಾರಿಗಳು, ಏನೂ ತೋಚದೆ ಸುಮ್ಮನೆ ನಿಂತುಕೊಂಡ ಒಂದಿಷ್ಟು ಮರಗಳು, ಅಸಹಾಯಕವಾದ ಕೆಲ ಸಂಸಾರಗಳ ಹೊತ್ತು ಕಾಲ ನೂಕುತ್ತಿರುವ ಅಪಾರ್ಟ್ಮೆಂಟ್ ಗ ಳು, ಅದರೊಳಗೆ ಒಂದಿಷ್ಟು ನಿರ್ಜೀವ ಜೀವಿಗಳ ಇಟ್ಟುಕೊಂಡು ಉಸಿರುಗರೆಯುತ್ತಿರುವ ಬದುಕು... ಆದರೂ..... ಸತ್ತಿಲ್ಲ ಜಗತ್ತು.... ಬದುಕಿನ ಭರವಸೆಗಳಿನ್ನೂ ಉಳಿದುಕೊಂಡಿವೆ.. ಹೌದು , ನಾವು ಬದುಕುತ್ತೇವೆ ಎಲ್ಲಿಯವರೆಗೆಂದು ಕೇಳಬೇಡಿ... ಆಸೆಯೇ ಸುಖದ ಮೂಲ! ಚಿತ್ರ- ಕವನ - ಎಲ್. ಎಸ್. ಶಾಸ್ತ್ರಿ
bottom of page