ಆದಾಯ ಕರ ವಿಚಾರ
ಮಾಲಿಕೆ -2 ತೆರಿಗೆ ವಿನಾಯಿತಿ ಮತ್ತು ಕಡಿತಗಳು 1] ಸೆಕ್ಶನ್ 10 ರ ಅನ್ವಯ ವೇತನ ದಾರರಿಗೆ ಅವರ ವಾರ್ಷಿಕ ಸಂಬಳದಲ್ಲಿ ಕೆಲವು ಭತ್ತೆಗಳಿಗೆ ಕರ ವಿನಾಯಿತಿಯನ್ನು ಘೋಷಿಸಲಾಗಿದೆ. ಅವುಗಳಲ್ಲಿ ಈ ಕೆಳಗಿನ ಭತ್ತೆಗಳು ಪ್ರಮುಖವಾಗಿವೆ. ಅ. ರಜಾ ಪ್ರಯಾಣ ವಿನಾಯತಿ [ಎಲ್.ಟಿ.ಸಿ] ಮೊಬಲಿಗೆಗೆ ವಿನಾಯಿತಿ ಬ. ಮರಣ ಮತ್ತು ನಿವೃತ್ತಿ ಉಪಾಧಾನ – ರೂ.20.00 ಲಕ್ಷದ ವರೆಗೆ ವಿನಾಯಿತಿ ಕ. ಪರಿವರ್ತಿತ ನಿವೃತ್ತಿ ವೇತನ [ ಕಮ್ಮ್ಯೂಟೇಶನ್]- ಪೂರ್ತಿ ಮೊಬಲಗು ವಿನಾಯಿತಿ ಡ. ಸರಕಾರಿ ಉದ್ಯೋಗಿಗೆ ನಿವೃತ್ತಿಯ ಹೊತ್ತಿನ ಪರಿವರ್ತಿತ ಗಳಿಕೆ ರಜೆಯ ಪೂರ್ತಿ ಮೊಬಲಗಿಗೆ ವಿನಾಯಿತಿ ಇದೆ. ಆದರೆ ಅರೆ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿಯ ನಿವೃತ್ತ ಉದ್ಯೋಗಿಗಳಿಗೆ ಪರಿವರ್ತಿತ ಗಳಿಕೆ ರಜೆಯ ಮೊಬಲಗಿನ ಗರಿಷ್ಠ ರೂ.3.00 ಲಕ್ಷದ ವರೆಗಿನ ಮೊತ್ತಕ್ಕೆ ಮಾತ್ರ ಕರ ವಿನಾಯಿತಿ ಇದೆ. ಇ.ಸ್ವಯಂ ನಿವೃತ್ತಿ ಅಥವಾ ಕೆಲಸದಿಂದ ವಜಾಗೊಂಡ ಉದ್ಯೋಗಿಗೆ ಸಿಗುವ ಪರಿಹಾರದ ಮೊತ್ತದಲ್ಲಿ ರೂ.5.00 ಲಕ್ಷದ ವರೆಗೆ ಕರ ವಿನಾಯಿತಿ ಇದೆ. ಫ. ಮನೆ ಬಾಡಿಗೆ ಭತ್ತೆ – ಬಾಡಿಗೆಯಲ್ಲಿ ಮೂಲ ವೇತನದ 10% ನ್ನು ಕಳೆದು ಉಳಿದ ಬಾಡಿಗೆಯ ಮೊಬಲಗಿಗೆ ತೆರಿಗೆ ವಿನಾಯಿತಿ ಇದೆ. ಗರಿಷ್ಠ ಮಿತಿ ಮನೆ ಬಾಡಿಗೆಯ ಮೊಬಲಗು. ಜ. ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದ ವಿಶೇಷ ಸೌಲಭ್ಯಗಳು [ ಪರ್ಕ್ವಿಸಿಟ್ಸ] ಗಳಿಗೆ ತೆರಿಗೆ ವಿನಾಯಿತಿ ಇದೆ. 2. ಸೆಕ್ಷನ್ 24 ಮತ್ತು ಪರಿಚ್ಛೇಧ 6 ರ ಪ್ರಕಾರ ಸೆಕ್ಷನ್ 80 ರ ಅಡಿಯಲ್ಲಿ ಉದ್ಯೋಗಿಗೆ ಈ ಕೆಳಗಿನ ಉಳಿತಾಯ/ ವೆಚ್ಚಗಳಿಗೆ ಆದಾಯದಲ್ಲಿ ಕಡಿತ ಮಾಡಲು ಅವಕಾಶವಿದೆ.
1]. ಸೆ.24 – ಗೃಹ ಸಾಲದ ಮೇಲಿನ ಬಡ್ಡಿ ಗರಿಷ್ಠ ರೂ.2.00 ಲಕ್ಷದ ವರೆಗಿನ ಮೊಬಲಗಿಗೆ ಆದಾಯದಲ್ಲಿ ಕಡಿತಕ್ಕೆ ಅವಕಾಶವಿದೆ. ಸಾಲವನ್ನು ಜಂಟಿಯಾಗಿ ಪಡೆದಿದ್ದರೆ ಪ್ರತಿಯೊಬ್ಬರಿಗೂ ಗರಿಷ್ಠ ರೂ.2.00 ಲಕ್ಷದವರೆಗೆ ಕಡಿತಕ್ಕೆ ಅವಕಾಶವಿದೆ. 2]. ಸೆ. 80 ಸಿ – ಈ ಪರಿಚ್ಛೇದದಡಿಯಲ್ಲಿ ಗರಿಷ್ಠ ರೂ.1.5. ಲಕ್ಷ ಹಣವನ್ನು ಈ ಕೆಳಗಿನ ಉಳಿತಾಯ ಯೋಜನೆಗಳಡಿಯಲ್ಲಿ ತೊಡಗಿಸಿದರೆ ಆದಾಯದಲ್ಲಿ ಕಡಿತ ತೋರಿಸಬಹುದಾಗಿದೆ. ಆ ಯೋಜನೆಗಳಾವವೆಂದರೆ ಎಲ್.ಐ.ಸಿ, ಪಿ.ಪಿ.ಎಫ್, ಇ.ಪಿ.ಎಫ್, ಎನ್.ಪಿ.ಎಸ್., ಸಿನೀಯರ್ ಸಿಟಿಜನ್ ಸ್ಕೀಮ್, ಇ.ಎಲ್.ಎಸ್.ಎಸ್., ಗೃಹ ಸಾಲ, ಸುಕನ್ಯಾ ಸಮೃದ್ಧಿ ಯೋಜನೆ, ಪೋಸ್ಟ್ ಆಫೀಸ್ ಟೈಮ್ ಡಿಪೋಸಿಟ್ ಸ್ಕೀಮ್ [ಐದು ವರ್ಷ] ಹಾಗೂ ಮಕ್ಕಳ ಶಾಲಾ ಶುಲ್ಕ, 3].ಸೆ.80 ಸಿ.ಸಿ.ಡಿ[1] ರಲ್ಲಿ ಎನ್.ಪಿ.ಎಸ್ -1.50 ಲಕ್ಷ ವಿನಿಯೋಗ 4] ಸೆ.80 ಸಿ.ಸಿ.ಡಿ[1ಬಿ] – ಎನ್.ಪಿ.ಎಸ್. ಹೆಚ್ಚುವರಿ ರೂ. 50000/- ವಿನಿಯೋಗ 5.] ಸೆ. 80 ಡಿ.ಡಿ.] ಅವಲಂಬಿತ ವಿಕಲ ಚೇತನ ರ ವೆಚ್ಚಕ್ಕಾಗಿ- ಅಂಗವೈಕಲ್ಯ 80% ಕ್ಕಿಂತ ಕಡಿಮೆ ಇದ್ದರೆ ರೂ.75000/- , ಅಂಗವೈಕಲ್ಯ 80% ಕ್ಕಿಂತ ಹೆಚ್ಚಿದ್ದರೆ ರೂ.125000/- 6]. ಸೆ.80 ಯೂ]. ಸ್ವಯಂ ವಿಕಲಚೇತನರಿದ್ದರೆ –ರೂ. 75000/ ರೂ.125000 [ಮೇಲಿನಂತೆ] 7.] ಸೆ.80 ಡಿ. – 1] ಆರೋಗ್ಯ ವಿಮೆ – 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಗರಿಷ್ಠ - ರೂ.25000/- ಮತ್ತು 60 ವರ್ಷ ಮೀರಿದ ಹಿರಿಯ ನಾಗರಿಕರಿಗೆ ರೂ.50000/- 2] ಹಿರಿಯ ನಾಗರಿಕರಿಗೆ ರೂ.5000/- ಆರೋಗ್ಯ ತಪಾಸಣೆ ಮತ್ತು ವೈದ್ಯಕೀಯ ವೆಚ್ಚ [ ಎಲ್ಲಾ ಸೇರಿ ಗರಿಷ್ಟ ರೂ.50000/-] 3] ಪಾಲಕರು ಹಿರಿಯರಾಗಿದ್ದರೆ ಅವರ ವೈದ್ಯಕೀಯ ವೆಚ್ಚಕ್ಕೆ ಗರಿಷ್ಠ ರೂ.50000/- ರವರೆಗೆ ಕಡಿತ [ವಿ.ಸೂ. ವೈದ್ಯಕೀಯ ವೆಚ್ಚ ಮತ್ತು ತಪಾಸಣೆಗೆ ಸಂಬಂಧಿಸಿದ ವೈದ್ಯರ ಪ್ರಿಸ್ಕ್ರಿಪ್ಶನ್ ಯಾ ಮೆಡಿಕಲ್ ಬಿಲ್ ಇಟ್ಟುಕೊಂಡಿರುವುದು ಸುರಕ್ಷಿತ] 8]. ಸೆ.80 ಜಿ-] ಆದಾಯ ಕರ ನಿಯಮದಡಿಯಲ್ಲಿ ಅಂಗೀಕೃತ ಪರಿಹಾರ ನಿಧಿ ಹಾಗೂ ದತ್ತಿ ಯೋಜನೆಗಳಿಗೆ ನೀಡಿದ ದೇಣಿಗೆಗೆ ಶೇಕಡಾ 100 ಮತ್ತು ಶೇಕಡಾ 50 ದರದಲ್ಲಿ ಕಡಿತ ಲಭ್ಯವಿದೆ. ಇದಕ್ಕೆ ದಾನ ಪಡೆದವರ ವಿಳಾಸ ಮತ್ತು ಪಾನ ಕಾರ್ಡ ನಂಬರ್ ನ್ನು ತೆರಿಗೆ ನಮೂನೆಯಲ್ಲಿ ನಮೂದಿಸಬೇಕಾಗುತ್ತದೆ. 9] ಸೆ. 80 ಜಿ.ಜಿ.ಸಿ/ಜಿ.ಜಿ.ಎ] – ರಾಜಕೀಯ ಪಕ್ಷ ಮತ್ತು ನಿಗಧಿತ ವೈಜ್ಞಾನಿಕ ಸಂಶೋಧನೆಯ ಕಾರ್ಯಕ್ಕೆ ನೀಡಿದ ದೇಣಿಗೆ 10] ಸೆ. 80 ಇ] ಉನ್ನತ ವ್ಯಾಸಂಗ ಕ್ಕಾಗಿ ಪಡೆದ ಸಾಲದ ಮೇಲಿನ 8 ವರ್ಷದ ವರೆಗಿನ ಪೂರ್ತಿ ಬಡ್ಡಿ 11.] ಸೆ. 80 ಜಿ.ಜಿ.] ಮನೆಬಾಡಿಗೆ ಭತ್ತೆಯನ್ನು ಪಡೆಯದ ಉದ್ಯೋಗಿಗಳಿಗೆ ಬಾಡಿಗೆಯ ಕಡಿತಕ್ಕೆ ಈ ಕೆಳಗಿನಂತೆ ಅವಕಾಶವಿದೆ. 1] ತಿಂಗಳಿಗೆ ರೂ.5000/- , 2]. ಹೊಂದಾಣಿಕೆ ಮಾಡಿದ ಒಟ್ಟೂ ಆದಾಯ 25%, 3.] ಬಾಡಿಗೆಯಲ್ಲಿ 10% ಒಟ್ಟೂ ಆದಾಯ ಕಳೆದು ಬರುವ ಮೊತ್ತ. 12] ಸೆ. 80.ಟಿ.ಟಿ.ಎ] ಹಿರಿಯ ನಾಗರಿಕರನ್ನು ಹೊರತು ಪಡಿಸಿದ ಉದ್ಯೋಗಿಗಳಿಗೆ ಉಳಿತಾಯ ಖಾತೆಯಲ್ಲಿ ಸಂದಾಯವಾಗುವ ಬಡ್ಡಿಗೆ ರೂ.10000/- ರವರೆಗೆ ತೆರಿಗೆ ವಿನಾಯಿತಿ ಇದೆ. 13] ಸೆ.80 ಟಿ.ಟಿ.ಬಿ.] ಹಿರಿಯ ನಾಗರೀಕರಿಗೆ ರೂ.50000/- ರ ವರೆಗಿನ ಬ್ಯಾಂಕ್, ಪೋಸ್ಟಲ್ ಟೇವಣಿ ಹಣಕ್ಕೆ ವಿನಾಯಿತಿ ಲಭ್ಯವಿದೆ. 14] ಸೆ. 80 ಇ.ಇ. & 80 ಇ.ಇ.ಎ ] ಮೊದಲನೇ ಸಲ ಮನೆ ನಿರ್ಮಾಣ/ ಖರೀದಿ ಗಾಗಿ ಪಡೆದ ಸಾಲದ ಮೇಲಿನ ಬಡ್ಡಿ ಹೆಚ್ಚುವರಿ ರೂ.50000/- ಕಡಿತ. 15] ಸೆ.80 ಇ.ಇ.ಬಿ] ವಿದ್ಯುತ್ ವಾಹನ ಖರೀದಿಯ ಸಾಲದ ಮೇಲಿನ ರೂ.1.5. ಲಕ್ಷದ ವರೆಗಿನ ಬಡ್ಡಿಗೆ ಕಡಿತ 3. ಪರಿಹಾರಗಳು: ಅ.] ಸೆ.87 ಎ ]: ಒಟ್ಟೂ ಆದಾಯದಲ್ಲಿ ಉಳಿತಾಯ ಮತ್ತು ವಿನಾಯಿತಿಗಳನ್ನು ಕಳೆದ ನಂತರ ಬರುವ ತೆರಿಗೆಯುಕ್ತ ಆದಾಯವು ರೂ.5.00 ಲಕ್ಷಕ್ಕಿಂತ ಕಡಿಮೆ ಇದ್ದರೆ ಗರಿಷ್ಠ ರೂ.12500/- ರ ವರೆಗೆ ಪರಿಚ್ಛೇದ 87 ಎ ರ ಅಡಿಯಲ್ಲಿ ಪರಿಹಾರ ಲಭ್ಯವಿದೆ. ಈ ಹಿನ್ನೆಲೆಯಲ್ಲಿ ರೂ.7.00 ಲಕ್ಷದ ವರೆಗೆ ವಾರ್ಷಿಕ ಆದಾಯ ಹೊಂದಿರುವವರು 80 ಸಿ ಯ ಅಡಿಯಲ್ಲಿ ರೂ.1.50 ಲಕ್ಷ ಉಳಿತಾಯ ಮಾಡಿದರೆ ಈ ಲಾಭ ಪಡೆಯಬಹುದಾಗಿದೆ. ಬ].ಸೆ.89] ವೇತನದ ಹಿಂಬಾಕಿ ಪಡೆದ ಉದ್ಯೋಗಿಗಳು ತಮಗೆ ಬಂದ ವೇತನದ ಹಿಂಬಾಕಿಯನ್ನು ಸಂಬಂಧಿತ ಹಿಂದಿನ ವರ್ಷಗಳಿಗೆ ವಿಭಜಿಸಿ ನಮೂನೆ ನಂ.10 ಇ ಯಲ್ಲಿ ನಮೂದಿಸಿದಾಗ ಬರುವ ಪರಿಹಾರವನ್ನು ಓಟ್ಟಾರೆ ತೆರಿಗೆಯಿಂದ ಕಡಿತ ಮಾಡಿಕೊಳ್ಳಬಹುದಾಗಿದೆ. ಐ.ಟಿ.ಆರ್. ಸಲ್ಲಿಸುವ ಹೊತ್ತಿನಲ್ಲಿ 10 ಇ ಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಿ ಸಲ್ಲಿಸಿದರೆ ಮಾತ್ರ ಈ ಲಾಭ ದೊರಕುತ್ತದೆಯೆಂಬುದನ್ನು ಮರೆಯಬಾರದು. ..... ಮುಂದುವರಿಯುತ್ತದೆ - ಶ್ರೀಪಾದ ಹೆಗಡೆ, ಸಾಲಕೋಡ ಕರ್ನಾಟಕ ವಿದ್ಯುತ್ ನಿಗಮದಲ್ಲಿ ಅಧಿಕಾರಿಯಾಗಿ ನಿವೃತ್ತಿಯಾದ ಶ್ರೀಪಾದ ಹೆಗಡೆ, ಸಾಲಕೊಡ ಇವರುತಮ್ಮ ಬಾಲ್ಯದ ದಿನಗಳಿಂದಲೂ ಸಾಹಿತ್ಯಾಸಕ್ತಿಯನ್ನು ಹೊಂದಿದವರು. ಕತೆ, ಹರಟೆ,ಲಲಿತ ಪ್ರಬಂಧ, ಕಾವ್ಯ, ನಾಟಕ,ವಿಮರ್ಶೆ ಮುಂತಾದಸಾಹಿತ್ಯ ಪ್ರಭೇಧಗಳಲ್ಲಿ ಬರವಣಿಗೆಯ ಮೂಲಕ ಕಳೆದ ನಾಲ್ಕು ದಶಕಗಳಿಂದ ತೊಡಗಿಕೊಂಡ ಇವರ ಕತೆ, ಪ್ರಬಂಧ, ಕವಿತೆಗಳು ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅವರ ಕತೆಗಳಿಗೆ ಬಹುಮಾನಗಳು ಸಂದಿವೆ. ‘ಬೆಕ್ಕಿನ ಮೀಸೆ’ ಎಂಬ ಅವರ ಕಥಾ ಸಂಕಲನ ಪ್ರಕಟವಾಗಿದೆ. ಹಾಸ್ಯವನ್ನು ಸ್ಥಾಯಿಭಾವವಾಗಿ ತಮ್ಮ ಬರೆಹಗಳಲ್ಲಿ ನೆಲೆಗೊಳಿಸಿ ಮಾನವೀಯ ವಿಚಾರಗಳನ್ನುಪ್ರಸ್ತುತಿ ಪಡಿಸುವದು ಅವರ ಬರೆಹದ ವೈಶಿಷ್ಟ್ಯ. - ಸಂಪಾದಕ