top of page

ಮನೆಮದ್ದಿನಲ್ಲಿ ಅಗಸೆ





ಅಗಸೆ      ಇವತ್ತಿನ ಮನೆಮದ್ದು . ಸೆಸ್ ಬಾನಿಯ ಗ್ರಾಂಡಿಪ್ಲೊರ ಪ್ಯಾಬೇಸಿ ಸಂಸ್ಕ್ರತ...ವಕೃಪುಷ್ಪಿ, ಅಗಸ್ತ್ಯ ಹಿಂದಿ..ಅಗಸ್ತ್ಯ ಇಂಗ್ಲಿಷ್..ಸೆಸ್ ಬಾನ್ ಪರಿಚಯ ಈ ಮರವನ್ನು ವಿಶೇಷವಾಗಿ ವೀಳ್ಯದೆಲೆಗೆ ಆಸರೆಯಾಗಿ ಬೆಳೆಯಲು ಬಳಸುತ್ತಾರೆ ಕೆಲವರು ತೋಟದ ಅಂಚುಗಳಲ್ಲಿ ತಂಪಿಗೂ ಬೆಳೆಸುತ್ತಾರೆ.ಇದು ೨೫/೩೦ ಪೂಟ್ ಎತ್ತರವರೆಗೂ ಬೆಳೆಯುವ ಬೆಂಡುಜಾತಿ ಮರ. ಇದರಲ್ಲಿ ೨ ಜಾತಿ ಹೂಬಿಡುವ ಮರ ಇದೆ ಗಾಢ ಕೆಂಪು ಅಲ್ಲದಿದ್ದರೂ ಅದನ್ನು ನಾವು ಕರೆಯೋದು ಕೆಂಪು ಇನ್ನೊಂದು ಬಿಳಿ ಎರಡೂ ಔಷಧೀಯ ಗುಣಹೊಂದಿದೆ.ಆದರೆ ಎಲ್ಲಾ ಗಿಡಗಳಲ್ಲಿ ಔಷಧಕ್ಕೆ ಬಿಳಿಯ ಜಾತಿ ಶ್ರೇಷ್ಠ ಆದರೆ ಅಗಸೆಯಲ್ಲಿ ಕೆಂಪು ಶ್ರೇಷ್ಠ. ಔಷಧೀಯ ಉಪಯೋಗ. ೧.ಕೆಮ್ಮು. ಕಫದಿಂದಾಗಿ ಕೆಮ್ಮು ಉಂಟಾಗಿದ್ದರೆ ಅಗಸೆ ಬೇರನ್ನು ನೀರಿನಲ್ಲಿ ತೆದು ೧/೨ ಚಮಚ ಗಂಧ ನೆಕ್ಕಬೇಕು ಅಥವಾ ಬೇರುಸಿಕ್ಕಾಗ ಒಣಗಿಸಿಟ್ಟುಕೊಂಡು ಪುಡಿಮಾಡಿ ಅರ್ಧ ಚಮಚ ಪುಡಿ ಬಿಸಿ ನೀರಿಗೆ ಹಾಕಿ ಕುಡಿಯಿರಿ. ಗಂಧ ತೇದು ಸೇವಿಸುವದಾದರೆ ೩ ದಿನ ಬೆಳಿಗ್ಗೆ ಹಾಗೆ ಪುಡಿ ಸೇವಿಸುವದಾದರೆ ೩ ಹೊತ್ತು ೨ / ೩ ದಿನ. ೨.ವಿಷ ಜಂತು ಕಡಿತ  ಸಣ್ಣಪುಟ್ಟ ಚೇಳು ಇನ್ನಿತರ ಕೀಟಗಳ ಕಡಿತಕ್ಕೆ ಅಗಸೇ ಬೇರು ತೇದು ಹಚ್ಚಿ  ೩ಗ್ಇರುಳುಗಣ್ಣು. ಅಗಸೆಸೊಪ್ಪನ್ನು ತಂದು ಜಜ್ಜಿ ರಸತೆಗೆದು ಮೆಣಸಿನಕಾಳು ನೆನೆಸಿ ಮರುದಿನ ಬಿಸಿಲಿಗೆ ಹಾಕಿ ಮತ್ತೆ ಸಂಜೆ ಇದೇರೀತಿ ಮತ್ತೆ ರಸ ತೆಗೆದು ಪುನಃ ಒಣಗಿಸಿದ ಕಾಳು ಹಾಕಿ ಮತ್ತೆ ಮರುದಿನ ಬಿಸಿಲಿಗೆ ಹಾಕಿ ಹೀಗೆ ೧೧ ದಿನ ಮಾಡಿ ನಂತರ ಸರಿಯಾಗಿ ಒಣಗಿಸಿ ಶಿಷೆಯಲ್ಲಿ ತುಂಬಿಡಿ ಪ್ರತೀದಿನ ಬೇರೆ ರಸ ಮಾಡಬೇಕೆಂದು ಗಮನದಲಿಡಿ.ಈಗ ಇರಳುಗಣ್ಣಿನ ರೋಗಿಗಳಿಗೆ ಈ ಕಾಳನ್ನು ಮತ್ತೆ ಅಗಸೆ ಸೊಪ್ಪಿನ ರಸದಲ್ಲಿ ತೇದು ಕಣ್ಣಿಗೆ ಅಂಜನದಂತೆ ಹಚ್ಚುತ್ತಾ ಬನ್ನಿ ಇದರಿಂದ  ಇರುಳುಗಣ್ಣು ವಾಸಿ ಅಗುತ್ತದೆ ಆದರೆ ಒಂದೆರಡು ದಿನ ಅಲ್ಲ ಹಲವಾರು ದಿನ ಮಾಡಬೇಕು. ಇನ್ನೊಂದು ವಿಧಾನ ದೇಶೀತಳಿ ಆಕಳಿನ ತುಪ್ಪ ಅರ್ಧಕೇಜಿ ತನ್ನಿ ಅದಕ್ಕೆ ೧ ಲೀಟರ್ ಅಗಸೆಸೊಪ್ಪಿನ ರಸ ಹಾಕಿ ಕಾಯಿಸಿ ನೀರಿನ ಅಂಶ ಆವಿಆಗುವವರೆಗೆ ಕಾಯಿಸಿ  ಹಾಗೇ ತಣಿಸಿ  ಗಾಜಿನ ಬಾಟಲಿಯಲ್ಲಿ ತುಂಬಿಡಿ ಇದನ್ನು ಆಹಾರದ ನಂತರ  ದಿನಕ್ಕೆರಡುಸಲ ೧ ಚಮಚದಂತೆ ಸೇವಿಸುತ್ತಾ ಬನ್ನಿ. ೪.ಅರ್ಧ ತಲೆ ನೋವಿಗೆ  ಅಗಸೆ ಹೂವಿನ ರಸ ಮೂಗಿನ ಹೊಳ್ಳೆಯಲ್ಲಿ ೩ ಹನಿ ಬಿಡಿ ೫. ಅಜೀರ್ಣ ಅಗಸೆ  ಎಲೆಯ ರಸ ೫/೬ ಚಮಚ ಬಿಸಿನೀರಿಗೆ ಹಾಕಿ ೨ ಸಲ ಸೇವಿಸಿ ಹೀಗೆ ೫/೬ ದಿನ ಮಾಡಿ. ೬.ಪಶು ಚಿಕಿತ್ಸೆ( ಗರ್ಭಸ್ರಾವ) ೪ ಹಿಡಿ ಅಗಸೆ ಸೊಪ್ಪನ್ನು ಕುಚ್ಚಲ ಅಕ್ಕಿತೊಳೆದ ನೀರಿನಲ್ಲಿ ಅರೆದು ೪೫ ದಿನ ಪಶುಗಳಿಗೆ ಕುಡಿಸಿ. ಪ್ರದೀಪ ಜಿ.ಹೆಗಡೆ ಬರಗದ್ದೆ ಕುಮಟಾ




80 views0 comments
bottom of page