top of page

ಮೌನ "ಸಂಕಲ್ಪ" ಸಾಧಕ

ರಾಜ್ಯದ ಕೆಲವೇ ಕೆಲವು ಸಂಸ್ಥೆಗಳ ಪೈಕಿ ಸಂಕಲ್ಪ ಒಂದು.ಗ್ರಾಮೀಣಭಾಗದಲ್ಲಿದ್ದುಕೊಂಡು,ಸಾಂಸ್ಕೃತಿಕತೆಯಿಂದ ಯಲ್ಲಾಪುರ ವನ್ನು ಹೊರ ಜಗತ್ತಿಗೆ ಪರಿಚಯಿಸಿ,ಪಸರಿಸಿದ ಶ್ರೇಯಸ್ಸು ಪ್ರಮೋದ ಅವರದ್ದು ಎಂದು ದಶಕಗಳ ಹಿಂದೆ ಡಾ.ಪಾಟೀಲ್ ಪುಟ್ಟಪ್ಪ ಹುಬ್ಬಳ್ಳಿಯ ಅವರ ಪ್ರಪಂಚದ ಕಚೇರಿಯಲ್ಲಿ ಬೇಟಿಯಾದಾಗ ಹೇಳಿದ ಮಾತು,ವ್ಯಕ್ತಪಡಿಸಿದ ಭಾವನೆ ನನನ್ನು ಪುಳಕಗೊಳಿಸಿತು.!

ಜಿಲ್ಲೆಯ ಪರಿಸರ ಪ್ರವಾಸೋದ್ಯಮದ ಬೆಳವಣಿಗೆಗೆ "ನಿಸರ್ಗ ಸ್ವರ್ಗ" ದ ದೂರದೃಷ್ಟಿ ಸಮನ್ವಯತೆ ಹೊಂದಿರುವ ಸುಸಂಸ್ಕೃತ, ಸಜ್ಜನ ರಾಜಕಾರಣಿ ಪ್ರಮೋದ ಹೆಗಡೆ.

ಸಂಕಲ್ಪ ದ ಮೂಲಕ ಸಾಂಸ್ಕೃತಿಕ ಕಿರೀಠ ಮುಕುಟಪ್ರಾಯ ವಾಗುವಂತೆ ಬೆಳೆಸಿದ್ದು,ಅವರ ಹೆಗ್ಗಳಿಕೆ.

ಯಲ್ಲಾಪುರ ವನ್ನು ಸಾಂಸ್ಕೃತಿಕ ಊರಾಗಿ,ಕಲೆಯ ತವರೂರಾಗಿ,ಹೊರಜಗತ್ತಿಗೆ ಕಾಣಿಸುವಲ್ಲಿ ಅವರು ಪಟ್ಟಪಾಡು,ವಹಿಸಿದ ಪರಿಶ್ರಮ,ನಡೆದ ನಡಿಗೆಯದ್ದೊಂದು ಯಶೋಗಾಥೆ!

ಪುಟ್ಟ ಊರು,ತೋಟಪಟ್ಟಿಗಳಲ್ಲಿ ಬೆವರುಚೆಲ್ಲಿ

ನೆಮ್ಮದಿ ನೆಲೆ ಕಂಡವರು,ವಿಭಿನ್ನತೆಯಲ್ಲೂ ಏಕತೆಯ ಶಾಂತಿ ಸಹಜೀವನ ನಡೆಸಿಕೊಂಡು ಬಂದ ಜನ. ಸುಸಂಸ್ಕೃತ, ಸಬ್ಯ ಜನರ ನಡುವೆ ಹರಿದುಹೋದ ಸಾಂಸ್ಕೃತಿಕ ಮನಸ್ಸುಗಳನ್ನು ದೃಢ ಸಂಕಲ್ಪದ ಮೂಲಕ ಸೃಜಿಸಿ ಒಗ್ಗೂಡಿಸಿದ ಪರಿ ರಮ್ಯ ರೋಚಕ.

ಅಸಂಘಟಿತ ಪ್ರಶಾಂತ ಮನಸ್ಸನ್ನು ಸಂಕಲ್ಪದಿಂದ ಬೆಸೆದು,ಪ್ರಸಾದ ಕಲೆಯ ಆವರಣದ ಚೌಕಟ್ಟು ರೂಪಿಸಿ,ನಾಡಿನ ನಕಾಶೆಯಲ್ಲಿ ಯಲ್ಲಾಪುರ ವನ್ನು ಕಾಣಿಸುವಂತೆ ಮಾಡಿದ ಶ್ರೇಯಸ್ಸು,ಯಶಸ್ಸು ಪ್ರಮೋದ ಹೆಗಡೆ ಅವರದ್ದು.

ತಾವಷ್ಟೇ ಬೆಳೆಯದೇ,ಎಳೆಯುವ,ಏಗುವ ನೀಗುವ ವ್ಯವಸ್ಥೆಯಲ್ಲಿ ತನ್ನೊಟ್ಟಿಗೆ ಸುಸಂಸ್ಕೃತ ಸಮೂಹವನ್ನು,ಸಾಂಸ್ಕೃತಿಕ ಪ್ರಜ್ಞೆಯಲಿ ಹೆಜ್ಜೆಯಿರಿಸಿ ಸಾಗುವಂತೆ ಮಾಡಿರುವುದೊಂದು ತಪಸ್ಸೇ ಸರಿ!

ಸಂಕಲ್ಪ ನಡೆದದಾರಿ,ಕ್ರಮಿಸಿದ ದೂರ,ಸಾಧಿಸಿದ ಗಮ್ಯತೆ,ಅಸಾಧಾರಣ.

ಯಕ್ಷಗಾನ, ಕಲೆ,ಸಾಹಿತ್ಯ,ಸಂಗೀತ ವಿಭಿನ್ನ ಸಾಂಸ್ಕೃತಿಕ ಆವರಣದಲ್ಲಿ ಊರಿಗೊಂದು ಹಿರಿಮೆ, ರೂಪಿಸಿದ್ದರ ಹಿಂದೆ ಪ್ರಮೋದ ಹೆಗಡೆ ಅವರ ಕೃತೃತ್ವ ಶಕ್ತಿ ಅಪಾರ.


ಮೌನ:

ಕಳೆಯುವ ಕಾಲವನ್ನು ಉಳಿಸಿ ಗಳಿಸಿಕೊಳ್ಳುವ ನೆಲೆಯಲ್ಲಿ "ಮೌನ" ಗ್ರಂಥಾಲಯ ಸ್ಥಾಪಿಸಿ,ಓದಿನ ಅರಿವಿನ ಕ್ಷಿತಿಜ ಎತ್ತರಿಸುವ ಪ್ರಯತ್ನದೊಂದು ಅಸಾಧಾರಣ ನಡೆ.ಮೌನವನ್ನು ಸಂಕಲ್ಪದಲ್ಲಿ ಕಟ್ಟಿಹಾಕಲು,ಹಿಡಿದಿಡಲು ಸಾಧ್ಯವಾಗದೇ ಹೋದರೂ,ಓದಿನ ಗೀಳು ಹಚ್ಚಿದ "ಮೌನ"

ಮಾತಿನ ಹರವು,ಹರಿವಿನ ಪಾಠ ಕಲಿಸಿದ್ದಂತೂ ಸತ್ಯ.


ಮಾತು:

ರಸವತ್ತಾದ ಮಾತು,ಮಾತಿನಿಂದ ಮೈಮರೆಸುವ,ಯೋಚನಾ ಲಹರಿ ಹಚ್ಚುವ ಪ್ರಮೋದ ಹೆಗಡೆ ಅವರ ಮಾತಿಗೆ ಮನಸೋಲದವರೇ ಇಲ್ಲ.!

ಸಭೆಯಲ್ಲಿ ಅವರ ಮಾತು ಕೇಳಿದ ನಂತರದವರ ಮಾತು ಸಪ್ಪೆ ಎನಿಸುತ್ತದೆ.ಹಾಗಾಗಿ ಕೊನೆಗೇ ಅವರ ಮಾತು ಇಟ್ಟುಕೊಳ್ಳುತ್ತಿದ್ದದ್ದು ವಾಡಿಕೆ.

ಚಿಟ್ಟಾಣಿ ಪ್ರವೇಶಕ್ಕೆ ನಿರೀಕ್ಷಿಸುವಂತೆ,ಅವರ ಮಾತಿಗೆ ಕಾಯುವ,ಕುತೂಹಲ ದಿಂದ ಆಲಿಸುವ ಮನಸ್ಸುಗಳಿಗೆ ಬರವಿಲ್ಲ.ಅವರ ಹಿತಮಾತು,ಚೌಕಟ್ಟು ಹಾಕಿಕೊಂಡಂತೆ.ಆಯಾ ಸಂದರ್ಭಕ್ಕೆ ತಕ್ಕಂತೆ ಆಡುವ ಮಾತು,ಮನಸ್ಸುಗಳನ್ನು ಅರಳಿಸುವಲ್ಲಿ ಹುರಿದುಂಬಿಸುವಲ್ಲಿ ಸಾಫಲ್ಯ ಕಂಡಿವೆ.

ಮೌಲ್ಯಾಧಾರಿತ ರಾಜಕಾರಣಿ ಹೆಗಡೆಯವರ ದಾರಿಯಲ್ಲಿ ನಡೆದ ಪ್ರಮೋದರಿಗೆ ರಾಜಕೀಯವಾಗಿ ಎಷ್ಟೇಲ್ಲಾ ಹೋರಾಟ ಪಟ್ಟು,ಪ್ರಯತ್ನ ನಡೆಸಿದರೂ,ಸಿಗಬೇಕಾದ ಅವಕಾಶ ಸಿಕ್ಕಿಲ್ಲ ಎಂಬ ಕೊರಗು ಇದ್ದೇ ಇದೆ.ಏಳು ಬೀಳಿನ ನಡುವೆ ಧೃಡತೆ ಕಳಕೊಳ್ಳದ ಪ್ರಮೋದ ಹೆಗಡೆ ಸರಳ ಸಜ್ಜನಿಕೆಯಿಂದ ಆಪ್ತರಾಗುತ್ತಾರೆ.

ಸಂಕಲ್ಪದ ದಿಟ್ಟತೆ,ಸಾಂಸ್ಕೃತಿಕ ಬದ್ದತೆ,ಇಲ್ಲಿನ ಪರಿಸರ ಪ್ರವಾಸೋದ್ಯಮ ಹೊರಜಗತ್ತಿಗೆ ಕಾಣಿಸುವ ಹಠ ಹೊತ್ತು ಎಪ್ಪತ್ತರ ದಾರಿಯಲ್ಲೂ ಉಳಿಸಿಕೊಂಡು ಬಂದ ಕ್ರೀಯಾಶೀಲತೆ,ಆಪ್ತತೆಯ ಒಡನಾಟದ ಪರಿ ಅಸಾಧಾರಣ.ಯಶಸ್ಸಿನ "ಪದ್ಮ"ದ ಹಿಂದಿರುವ ಪ್ರಮೋದ ಇನ್ನಷ್ಟು

ನಿಮ್ಮದಾಗಲೆಂಬ ಹರಕೆ ಹಾರೈಕೆ.

ಅಭಿನಂಧನೆ:

ಪ್ರಮೋದ ಹೆಗಡೆಗೆ ಎಪ್ಪತ್ತು ತುಂಬಿದ ಹಿನ್ನೆಲೆಯಲ್ಲಿ ಡಿ.೨೫ ರಂದು ಇಡೀ ದಿನವೀಡಿ ವೈವಿಧ್ಯಮಯ ಕಾರ್ಯಕ್ರಮದ ಮೂಲಕ ಪ್ರಮೋದ ಹೆಗಡೆ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಗುತ್ತದೆ.ಗಣ್ಯರ ಉಪಸ್ಥಿತಿ, ಅಭಿನಂಧನೆ,ಸಿದ್ದ ಪ್ರಸಿದ್ದರಿಂದ ಯಕ್ಷಗಾಯನ,ಹಾಗೂ ಯಕ್ಷಗಾನ ಪ್ರದರ್ಶನ ನಡೆಯಲಿದೆ.ಹಿನ್ನೆಲೆಯಲ್ಲಿ ಈ ಬರಹ.


ಸುಬ್ರಾಯ ಗಾಂವ್ಕಾರ ಬಿದ್ರೆಮನೆ

೮೭೬೨೦೯೯೧೮೦




11 views0 comments
bottom of page