top of page

ಮಾತನಾಡುವ ಕಷ್ಟ!

ಹೌದು,

ಮಾತೇ ಆಡಬೇಡ ಅಂದರೆ

ಅಂಬೋರಿಗೇನು ಅನ್ನುವುದು?


ಅಂತಾ ದಿನವೊಂದಿತ್ತು--

--ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:-

ಸುತ್ತಲೂ ಕಾದವರ ತೆರೆದ ಕಿವಿಗೆ!?

ಒಂದು ಸಲ ಹೇಳು

ಇನ್ನೊಂದೇ ಬಾರಿ--

ಅಮ್ಮಾs ಅನ್ನು,ಅಪ್ಪಾs ಅಂದು ಬಿಡು!

ಕಳ್ಳಾ,ಕಳ್ಳಿ!

ನಿನ್ನ ನಲ್ಲಿಗೆ ನಾವೇ ಕೊಡಪಾನ!

ತುರ್ತಾಗಿ ಬೇಕಿತ್ತು, ಖಾಲಿ ಮಾಡಲಿಕ್ಕೆ!,

ಒಂದು ಸಲ ಹೇಳಿಬಿಡು: "ಅಜ್ಜಾ,ಅಜ್ಜಿ' ಅಂತ!

ಕಿಸೆ ತುಂಬಾ ಮಾವಿನ ಹಣ್ಣು ಕೊಡುವೆ"

ಎಷ್ಟಿತ್ತು ಜುಲುಮೆ.


ಈಗ ಯಾರಿಗೂ ಮಾತೇ ಬೇಡ!

ಆಡಿದರೆ, 'ವಾಚಾಳಿ'

ಆಡದಿದ್ದರೆ "ಮೂಕಜಾಣ"

ಬಿರುದು!--

--ಕೇಳಿ,ತಿಳಿದ ಅಷ್ಟೋ ಇಷ್ಟು ಮಾತೂ ಬತ್ತಿ ಹೋಗಿದೆ.


ಅಬ್ಬಾ!

ಇಲ್ಲಿ ಮಾತು ಆಡಿದರೂ ಕಷ್ಟ,

ಆಡದಿದ್ದರಿನ್ನೂ ಕಷ್ಟ,

ಎಂದು ಅರಿವಾಗಿದೆ,

ಅದಕೇ,

ಯಾರು ಕೇಳಲಿ ಬಿಡಲಿ,

ಅಗತ್ಯ ಬಿದ್ದಾಗ ಆಡದಿರೆನು.


ಗಣಪತಿ ಗೌಡ,ಹೊನ್ನಳ್ಳಿ

22 views0 comments
bottom of page