top of page

ತೊಟ್ಟು-೨೬೩

ಒಂದೆ ಕಾಲ

-------------

ಕಾಲವೆಂದರೆ

ಒಂದೆ-

ಈ ಕ್ಷಣದನುಭವದ

ವರ್ತಮಾನ ಕಾಲ;

ಭೂತ

ಹಚ್ಚುತ್ತದೆ

ಹಿಂದೆ

ಹೋದುದರ

ಹಳಹಳಿಗೆ;

ಭವಿಷ್ಯ,

ಬಾಯಿ

ತೆರೆಸುತ್ತದೆ

ನಾಳೆ

ಬರ-ಬಹುದೆಂದು,

ಒಳ್ಳೆಯ

ಗಳಿಗೆ.


ಡಾ. ಬಸವರಾಜ ಸಾದರ.

9 views0 comments
bottom of page