top of page

ತೊಟ್ಟು-೧೯೪

ಭಾರ-ಹಗುರ.

------------------

ಸಣ್ಣ ಕಲ್ಲು

ತೇಲದು

ನೀರ ಮೇಲೆ;

ಕಲ್ಲು ಬಂಡೆ

ಹೊತ್ತ

ಹಡಗು

ತೇಲುತ್ತದೆ

ಅದೇ

ನೀರ ಮೇಲೆ!

ಆಸರವಿದ್ದರೆ

ಆಗದು

ಯಾವುದೂ

ಭಾರ,

ಇದು ವಿಜ್ಞಾನವೂ

ಒಪ್ಪುವ

ಸತ್ಯದ

ಸಾರ.


ಡಾ. ಬಸವರಾಜ ಸಾದರ

4 views0 comments
bottom of page