top of page

ತೊಟ್ಟು-೧೩೩

ತುಲಾಸಂಕಟ


ಅಳತೊಡಗಿದವು

ಚಿನ್ನ-ಬೆಳ್ಳಿ.

ಬಿಕ್ಕಿ ಬಿಕ್ಕಿ!

ಕಬ್ಬಿಣದ

ತಕ್ಕಡಿಯಾಯ್ತು

ಕಕ್ಕಾಬಿಕ್ಕಿ!!

ಯಾಕೆಂದು

ತಿಳಿಯದೆ

ಕಣ್ತೆರೆದು

ನೋಡಲು;

ತನ್ನೊಂದು

ಪರಡಿಯಲ್ಲಿ

ಬೆಳ್ಳಿ-ಚಿನ್ನ;

ಮತ್ತೊಂದರಲಿ

ಕಂಡದ್ದು

ಭ್ರಷ್ಟರನ್ನ!!

ಡಾ. ಬಸವರಾಜ ಸಾದರ

2 views0 comments
bottom of page