top of page

ಆರತಿ ಕುಂಡಿಗೆ

ಇದರ ಸಂಪೂರ್ಣ ಔಷಧೀಯ ವಿವರ ...



ಸಸ್ಯ ಶಾಸ್ತ್ರ: cost us specious

ಕುಟುಂಬ: costaceae.

ಸಂಸ್ಕೃತ: ಪುಷ್ಕರ

ವಿಶೇಷವಾಗಿ ಕೆಂಪುಬಣ್ಣದ ಕಾಂಡ ಹೊದಿರುವ ಗಿಡ೬/೮ ಅಡಿ ಎತ್ತರ ಬೆಳೆಯುತ್ತದೆ ಬುಡದಲ್ಲಿ ಗಡ್ಡೆ ಇರುತ್ತದೆ.ಹೂವನ್ನು ಚಿತ್ರದಲ್ಲಿ ನೋಡಿ. ಇದನ್ನು ಮೊದಲು ದೀಪಾವಳಿಯಲ್ಲಿ ಆರತಿ ಮಾಡಲು ಬಳಸಿಕೊಳ್ಳುತ್ತಿದ್ದರು ಅದರಿಂದ ಇದಕ್ಕೆ ಈ ಹೆಸರು ಬಂತು ಹೀಗೆ ಹೂ ಬರುವ ಭಾಗವನ್ನು ಕತ್ತರಿಸಿ ಅದಕ್ಕೆ ನೆಣೆಹಾಕಿ ಆರತಿ ಮಾಡಲು ಬಳಸಿಕೊಳ್ಳುವ ಪದ್ಧತಿ ಇತ್ತು.ಅಗಸ್ಟ/ ಸೆಪ್ಟೆಂಬರ್ ನಲ್ಲಿ ಹೂ ಬರುತ್ತದೆ.ನಮ್ಮದೇಶದ ಪಶ್ವಿಮ ಕರಾವಳಿ, ಸಹ್ಯಾದ್ರಿ ಕಾಡುಗಳಲ್ಲಿ ಕಾಣಬಹುದು


ಯಾವ ಕಾಯಿಲೆಗೆ

೧ ಮೂಲವ್ಯಾಧಿ

೨ ಕೋವೆ

೩ ಕಿವಿನೋವು

೪ರಕ್ತ ಮೂಲವ್ಯಾಧಿ

೫ ಕಪ ಕರಗಿಸಲು

ಪಶುಗಳ ಚವಿರೋಗಕ್ಕೆ


೧ಮೂಲವ್ಯಾಧಿಗೆ ...ಆರತಿಕುಂಡಿಗೆ ಬುಡದಲ್ಲಿ ಗಡ್ಡೆ ಇರುತ್ತದೆ ಇದನ್ನು ಕಿತ್ತು ಸ್ವಚ್ಛ ಮಾಡಿ ಬಿಸಿ ಬೂದಿಯಲ್ಲಿ ಹುಗಿದು ಹದವಾಗಿ ಬೆಂದನಂತರ ಸ್ವಲ್ಪ ಕಾಯಿತುರಿ ಜೀರಿಗೆ ಹಾಕಿ ಬೀಸಿ ಕಡೆದ ಮಜ್ಜಿಗೆ ಸೇರಿಸಿ ಊಟ ಮಾಡಿ ಹಸಿಮೆಣಸು,ಮಸಾಲೆ ಪದಾರ್ಥಗಳು, ಜಾಸ್ತಿ ಖಾರ ಇಬನ್ನು ತಿನ್ನದಿರಿ ಹೀಗೆ ೩/೪ ದಿನ ಮಾಡಿ

೨.ಚಿಕ್ಕ ಮಕ್ಕಳ ಕೋವೆ

ಆರತೀಕುಂಡಿಗೆ ಗಡ್ಡೆ ೫೦ ಗ್ರಾಂ ಬಿಸಿಬೂದಿಯಲ್ಲಿ ಹುಗಿದು ಜಜ್ಜಿ ರಸ ತೆಗೆದು ಸ್ವಲ್ಪ ಕಲ್ಲುಸಕ್ಕರೆ ಪುಡಿ ಬೆರೆಸಿ ಕುಡಿಸಿ.

೩ಕಿವಿನೋವಿಗೆ..

ಆರತಿಕುಂಡಿಗೆ ಗಿಡದ ಕಾಂಡಕತ್ತರಿಸಿ ಬಿಸಿ ಬೂದಿಯಲ್ಲಿ ಹುಗಿದು ತೆಗೆದು ಸ್ವಚ್ಛ ಮಾಡಿ ಜಜ್ಜಿ ರಸತೆಗೆದು ೫ ಹನಿ ನೋವಿರುವ ಕಿವಿಗೆ ಹಾಕಿ ಹೀಗೆ ಮರುದಿನ ಮಾಡಿ.

೪..ರಕ್ತಮೂಲವ್ಯಾಧಿ ..ಇದಕ್ಕೆ ಆರತಿ ಕುಂಡಿಗೆ ಗಡ್ಡೆ೫೦ಗ್ರಾಂ ಜಜ್ಜಿ ರಸತೆಗೆದು ಎಮ್ಮೆ ಹಾಲಿನಿಂದ ಮಾಡಿದ ಮೊಸರು ಒಂದು ಲೋಟಕ್ಕೆ ಹಾಕಿ ಕುಡಿಸಿ ಹೀಗೆ ೫ ದಿನ ಮಾಡಿ ಮಾಡುವಾಗ ಜಜ್ಜಿದ ಭಾಗದಲ್ಲಿ ಸ್ವಲ್ಪವೂ ರಸ ಇಲ್ಲದಿದ್ದಂತೆ ನೀರು ಹಾಕಿ ಜಜ್ಜಿ ರಸ ಸಂಪೂರ್ಣವಾಗಿ ತೆಗೆಯಿರಿ.

೫.ಕಪ

ಆರತಿಕುಂಡಿಗೆ ರಸ ೧೦೦ ಮಿಲಿ ಇದಕ್ಕೆ ಕೆಂಪು ಕಲ್ಲುಸಕ್ಕರೆ ೧೫/೨೦ ಗ್ರಾಂ ಸೇರಿಸಿ ಕದಡಿ ಕುಡಿಯಿರಿ ಇದನ್ನು ಕೇವಲ ಒಂದು ಸಲ ಕೊಟ್ಟರೆ ಸಾಕು ಕಪ ವಾಂತಿಯಾಗಿ ಹೋಗುತ್ತದೆ / ನೀರಾಗುತ್ತದೆ .ಎಣ್ಣೆಯಲ್ಲಿ ಕರಿದ ತಿಂಡಿ ದೇವಿಸದಿರಿ ೨/೩ ದಿನ.


ಪಶುಗಳ ರೋಗದಲ್ಲಿ ಬಳಕೆ

ಚವಿ..ಅಂದರೆ ನಿಗದಿತ ಅವಧಿಗೆ ಮೊದಲು ಕರು ಹಾಕುತ್ತವೆ ಅಥವಾ ಕಿವಿ ,ಬಾಲದಲ್ಲಿ ಕೂದಲು ಉದುರುತ್ತದೆ.ಹೊಟ್ಟೆ ಡುಬ್ಬರಿಸಿ ದೇಹ ದುರ್ಬಲ ಆಗುತ್ತದೆ.ಇದಕ್ಕೆ ಪರಿಹಾರವಾಗಿ ಪ್ರತಿಯೊಂದೂ ೧೦೦ ಗ್ರಾಂನಂತೆ ಆರತಿಕುಂಡಿಗೆ+ಮರದಮೇಲೆ ಬೆಳೆಯುವ ಬಂದಳಿಕೆ( ವೃತ್ತಕಾರ ಎಲೆ)+ಮರಬಾಳೆಕಾಯಿ ಇದನ್ನು ಅಕ್ಕಿತೊಳೆದ ನೀರಿನಲ್ಲಿ ಅರೆದು ಗೊಟ್ಟದಲ್ಲಿ ಆದಿತ್ಯವಾರ ಕುಡಿಸಲು ಪ್ರಾರಂಭಿಸಿ ೩ ವಾರ ಮಾಡಿ.


ಇನ್ನೂ ಹೆಚ್ಚಿನ ಔಷಧ ನೆನಪಾದರೆ / ಇನ್ನಾರಿಂದಲೋ ಸಿಕ್ಕರೆ ಮತ್ತೆ ಇದಕ್ಕೆ ಇತರ ಔಷಧ ಹೇಳುವಾಗ ಸೇರಿಸುತ್ತೇನೆ .ಗೊತ್ತಿದ್ದವರೂ ಕಾಮೆಂಟ್ ಮಾಡಿ.


ಪ್ರದೀಪ ಜಿ.ಹೆಗಡೆ ಬರಗದ್ದೆ ಕುಮಟಾ.




41 views0 comments
bottom of page