ನನಗೂ ಈಗ ಮಗುವಾಗುವ ಆಸೆ
ಅಂಬೆಗಾಲಿಕ್ಕಿ ನನ್ನದೇ ಆದ ರಾಗದಲಿ ಓಡೋಡಿ
ತಾಯ ಮಡಿಲ ಸೇರುವಾಸೆ
ಲೆಕ್ಕ ಗಿಕ್ಕವ ಬದಿಗಿಟ್ಟು ಅಕ್ಕ ಪಕ್ಕದವರ ಬಳಿಗೆ ಆಡುತಾಡುತ ಬಂದು ನಗೆಯ ಚಿಮ್ಮುತ ನಲಿಯುವಾಸೆ
ಸಿಟ್ಟು ಸಿಡುಕುಗಳ ಕಳೆದಿಟ್ಟು
ಮಮತೆ ಸಮತೆಯ ತೊಟ್ಟು
ಗಿಣಿರಾಮನಾಗುವ ಆಸೆ
ಆಗಷ್ಟೆ ಕಡೆದ ಬೆಣ್ಣೆಯ ತೆರದಿ
ಎಲ್ಲರಿಗು ಬೇಕಾಗಿ ಬದುಕುವಾಸೆ
ನಾನು ನನ್ನದು ಎಂಬ ಭಾವವನು ತೊರೆದು ನೀನು ನಿನ್ನದು ಎನುತ ಎಲ್ಲರೊಳಗೊಂದಾಗುವ ಆಸೆ
ಕೊಂಕಿನುಕುತಿಯ ಬಿಂಕದುಕುತಿಯ ಬದಿಗಿಟ್ಟು
ಬಿದ್ದವರ ಎದ್ದು ನಿಲಿಸುತ ನಗುತ ನಗಿಸುತ ಮಗುವಾಗಿ ಬಾಳುವಾಸೆ
ಒಡೆಯನಿಲ್ಲದ ಒಡವೆಯಿಲ್ಲದ
ಭೇದ ಭಾವವಿರದ ಸಾಮರಸ್ಯದ ಸಾಮಗಾನದ
ನಾಡಿನಲಿ ಅರಿತರು ಮರೆತಂತಿರುವ ಕಂದ ನಾನಾಗುವಾಸೆ.
ಶ್ರೀಪಾದ ಶೆಟ್ಟಿ
ಮಿತ್ರಾ ನನಗೂ ನಿನ್ನ ಕವನ ಓದುವಾಸೆ. ಓದಿ ಖುಷಿಪಡುವ ಆ