**
ಎಷ್ಟೊಂದು ಜನ
ಮಲಗಿದ್ದಾರಿಲ್ಲಿ...
ಒಬ್ಬರೂ ಮಾತಾಡುತ್ತಿಲ್ಲ.
ಬಹುಶಃ
ಮಾತು ಮುಗಿಸಿಯೇ
ಬಂದಿರಬೇಕು;
ಮಕ್ಕಳು, ಮುದುಕರು,
ತಂದೆ ಮಗ, ತಾಯಿ ಮಗಳು,
ಅತ್ತೆ ಸೊಸೆ, ಮಾವ ಅಳಿಯ,
ಬಾವ ನೆಂಟ, ಗಂಡ ಹೆಂಡತಿ
ಯಾರ್ಯಾರೋ
ಅಕ್ಕಪಕ್ಕದಲ್ಲೇ
ಮಲಗಿದ್ದಾರೆ....
ಆದರೂ
ಸದ್ದು ಗದ್ದಲವಿಲ
ಯಾರನ್ನು ಯಾರೂ
ಮಾತನಾಡಿಸುತ್ತಿಲ್ಲ,
ಯೋಗಕ್ಷೇಮ ಕೇಳುತ್ತಿಲ್ಲ,
ಜಗಳವಾಡುತ್ತಿಲ್ಲ,
ದೂರು ಹೇಳುತ್ತಿಲ್ಲ
ಜಾತಿ ಕೇಳುತ್ತಿಲ್ಲ...
ನಿದ್ದೆಯೋ...
ನಿರಾಸಕ್ತಿಯೋ....
ನಿರ್ಲಿಪ್ತತೆಯೋ....
ಯಾರಿಗೆ ಯಾರೂ ಇಲ್ಲದಂತೆ
ಸಂಬಂಧವೇ ಇಲ್ಲದಂತೆ
ನಿಶ್ಚಿಂತೆಯಿಂದ
ಶಾಂತ.....
ನೀರವ ಮೌನ...
ಅಲ್ಲಲ್ಲ....
ಸ್ಮಶಾನ ಮೌನ..!
- ಎಲ್. ಎಸ್. ಶಾಸ್ತ್ರಿ
Comentários