ಕೆಚ್ಚೆದೆಯ ವೀರ ಸನ್ಯಾಸಿ
ದೇಶದ ಉದ್ದಗಲ ವ್ಯಾಪಿಸಿದೆ ನಿನ್ನ ಖ್ಯಾತಿ
ನಿನ್ನ ನಾಲಿಗೆಯಲ್ಲಿ ನಲಿದಾಡಿ
ಮೆರೆದಳಂದು ವಾಗ್ದೇವಿ
ಅಮೃತ ವಾಗ್ಝರಿಯಲ್ಲಿ
ಮಿಂದೆದ್ದರು ವಿದೇಶಿಯರು
ಕರತಾಡನದ ನಡುವೆ
ಮೊಳಗಿತಲ್ಲಿ ಭಾರತಮಾತೆಯ ಕೀರ್ತಿ
ಕಾವಿ ಬಟ್ಟೆಗೆ ದೊರಕಿತು ಮಾನ್ಯತೆ
ನೊಂದವರ ಬೆಂದವರ ಹಸಿದವರ
ಹಿಂದಿರುವ ಮೌಢ್ಯ ಪರದೆಯ ಸರಿಸಿದ
ಅಹಂ ಬ್ರಹ್ಮಾಸ್ಮಿ ಗುಡುಗು ಮೊಳಗಿತು
ಬದುಕು ಕಿರಿದು ನಿನ್ನದು
ಮಹಿಮೆ ಹಿರಿದು
ಮತ್ತೊಮ್ಮೆ ಎಂದು
ಮೊಳಗುವುದು ವಿವೇಕವಾಣಿ :
ಏಳಿ ಎದ್ದೇಳಿ ಗುರಿಮುಟ್ಟುವ ವರೆಗೆ ವಿರಮಿಸದಿರಿ.

Commentaires