ಧನಕನಕ ವಸ್ತು ವೈಢೂರ್ಯ ಆಚೆ ಬೀಸಾಕು
ಬಡತನದ ಸಿರಿ ಸುಖಕೆ ಮಳೆಬಿಲ್ಲ ಬಣ್ಣ ಸಾಕು
ಬಾಳ ಸವಿಗಳಿಗೆಗಳ ಹೊದ್ದು ಮಲಗಲು
ಹರಿದ ಕಂಬಳಿ ಕೋರಿ ಕೌದಿ ತುಂಡು ಸಾಕು
ಹಂಸತೂಲಿಕಾ ತಲ್ಪ ಅರಮನೆಗಳಲ್ಲಿರಲಿ
ಹೊಟ್ಟೆ ತುಂಬಲಿಕೆ ಸೆರೆ ನುಚ್ಚಿನಂಬಲಿ ಸಾಕು
ಪರಮ ಪರಮಾಪ್ತ ದೇವ ದೇವತೆಗಳು ಸಿಗದಿರಲಿ
ಹಗಲಿರುಳು ಜೊತೆಗಿರುವ ಸಹಜೀವಿ ಸಂಗಾತಿ ಸಾಕು
ಅಮವಾಸ್ಯೆ ಹುಣ್ಣಿಮೆಗಳ ಗೊಡವೆ ಬೇಡ ಚಂದಿರ
ಕತ್ತಲಿದ್ದರೆ ಇರಲಿ ಚುಕ್ಕೆಬಳಗದ ಸಖ್ಯ ಸಾಕು
ಚಂದ್ರಗೌಡ ಕುಲಕರ್ಣಿ
Bình luận