ಅಂಗಳದ ಹೂವಾಗಿ
ಅರಳಿದರೆ..... ಅವಳು
ಮಕರಂಧ ನಿಮಗೆ ತಾನೆ
ಚಿವುಟದಿರಿ ನೀವು
ನದಿಯಾಗಿ ಹರಿದರೆ...ಅವಳು
ದಾಹ ಆರಿಸುವಳು ....
ಕೆಂಡದಂತೆ ಧಗಿಸದಿರಿ ನೀವು
ಮರವಾಗಿ ಬೆಳೆದರೆ ಅವಳು
ನೆರಳು ನಿಮಗೆ ತಾನೆ
ಬುಡವೇ ಕಡಿಯದಿರೀ ಕೊಡಲಿಯಾಗಿ ನೀವು
ಗೂಡು ಕಟ್ಟಿ ಜೇನು ತುಂಬಿದರೆ ಅವಳು
ಸಿಹಿಯೂ ನಿಮಗೆ ತಾನೆ
ಭ್ರಮೆಯ ಹಗ್ಗದಿಂದ ಮನೆ ಮನ ಕಟ್ಟಿ
ಬಿರುಕು ಮೂಡಿಸದಿರೀ ನೀವು
ಬೆಳಕಾಗಿ ನಿಂತರೆ ಅವಳು
ಆರಿಸದಿರಿ...... ನೀವು
ಕತ್ತಲು ನಿಮಗೆ ತಾನೆ
ಬಯಲು ಬಯಸಿದರೆ ಅವಳು
ಗೋಡೆ ಕಟ್ಟದಿರಿ... ನೀವು
ಪ್ರತಿ ಕನಸಿಗೂ ಅವಳ ಹಕ್ಕಿದೆ
ಎಂ.ಜಿ.ತಿಲೋತ್ತಮೆ, ಭಟ್ಕಳ
Kommentare