ಆಹುತಿ

ದೇಹ ಹಿಂಡಿ ಹಿಪ್ಪೆಯಾಗಿಸಿದೆ ಕಾರಿನಲ್ಲಿ ಬಸ್ಸಿನಲ್ಲಿ ಹಗಲಲ್ಲಿ ನಸುಕಿನಲ್ಲಿ ಕಾನನದಲ್ಲಿ ನೀರವ ಅಹನಿಯಲ್ಲಿ

ಬೆಳಕು ಸೀಳುವ ಮುನ್ನ ಬ್ರೇಕಿಂಗ್ ನ್ಯೂಸ್‌ಗಳಿಗೆ ಆಹಾರ ಭುವನ ಸುಂದರಿ ಸ್ಪರ್ಧೆಯಲ್ಲಿ ದೇಹ ಸೌಂದರ್ಯದ ಬಗ್ಗೆ ತೀರ್ಪುಗಾರರ ತಾರೀಪು

ಹೆಣ್ಣು ಭ್ರೂಣ ಪತ್ತೆ ಮಾಡುವ ತವಕದಲ್ಲಿ ಸ್ಕೆನ್ನಿಂಗ್ ಮಿಷನ್ ಗಳಿಗೆ ಪುರುಸೊತ್ತಿಲ್ಲ

ನದಿಯ ತಟದಲ್ಲಿ ರೇಲ್ವೆ ಸೇತುವೆಯ ಕೆಳಗೆ ಅರೆಬೆಂದ ಶವವಾಗಿ ಖಾಕಿಗಳಿಗೆ ಮಹಜರು ಮಾಡಲು.... ..

________________ ಅನಿಲ ಕಾಮತ ಸಿದ್ದೇಶ್ವರ

26 views0 comments