10,000ಸದಸ್ಯರ ಸಂಭ್ರಮ ಆಚರಣೆ.

ಈ ಬಳಗಕ್ಕೆ ನನ್ನನ್ನು ಆಹ್ವಾನಿಸಿದ್ದು ಯಾರು ಎಂದು ನನಗೆ ನೆನಪಿಲ್ಲ... ಯಾವಾಗ ಸೇರಿದೆ ನೆಂಬುದು ಸರಿಯಾಗಿ ತಿಳಿಯದು... ಆದರೂ ನಾನು ಮಾಡುವ ಸಣ್ಣ ಸಣ್ಣ ಪ್ರಯತ್ನಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಬಳಗಕ್ಕೆ ನಾನು ಸದಾ ಋಣಿ.... ಈ ಬಳಗ ಇನ್ನೂ ಬೆಳೆಯಲಿ.... ಬೆಳಗಲಿ....


ಪುಸ್ತಕ-- ಗುಡು ಗುಡು ಗುಮ್ಮಟ ದೇವರು

ಲೇಖಕರು ಮೂರ್ತಿ ದೇರಾಜೆ

ಸಮನ್ವಯ ಪ್ರಕಾಶನ

ಆರಾಧನಾ, ವಿಟ್ಲ, ದ. ಕ.574243.

ಬೆಲೆ:ರೂ 50

ವಿಶೇಷ ಪ್ರತಿ :60

ಪುಟಗಳು: 64

ಮುದ್ರಣ: 2004


ಪಂಜೆ ಮಂಗೇಶರಾಯರ ಕಥೆ ಆದರಿಸಿ ಮೂರ್ತಿ ದೇರಾಜಿಯವರು ರಚಿಸಿದ ನಾಟಕ *ಗುಡು ಗುಡು ಗುಮ್ಮಟ ದೇವರು *... ಎಂಬ ಮಕ್ಕಳ ನಾಟಕ.... ಇವರು ಲೇಖಕರು ಮತ್ತು ನಾಟಕ ನಿರ್ದೇಶಕರು ಕೂಡ ಹೌದು... ನಾಟಕಕಾರ ತನ್ನ ಕೃತಿಯಲ್ಲಿ ತನ್ನನ್ನೇ ಕಂಡುಕೊಳ್ಳುವುದು ಅಂದಂತೆ ಮೂರ್ತಿಯವರೊಳಗಿನ ಮಗು ಮತ್ತೆ ಮತ್ತೆ ಮಕ್ಕಳ ನಾಟಕಗಳತ್ತ ನೂಕುವುದು.... ಇವರ ಮೊದಲ ಕೃತಿ- ಕಪ್ಪು ಕಾಗೆ ಯ ಹಾಡು... ಎರಡನೆಯದು ಗುಡು ಗುಡು ಗುಮ್ಮಟ ದೇವರು...


ಇವರು ಹಲವಾರು ಹಿರಿಯರ ಕಿರಿಯರ ನಾಟಕಗಳಿಗೆ ಸಂಗೀತ ವಿನ್ಯಾಸ ಮಾಡಿದ್ದಾರೆ... ಹಲವಾರು ಮಕ್ಕಳ ನಾಟಕಗಳನ್ನು ಹಲವಾರು ಶಾಲೆಗಳಲ್ಲಿ ನಿರ್ದೇಶಿಸಿ ಆಡಿಸಿದ್ದಾರೆ.... ಅವರ ಪ್ರಕಾರ ಮಕ್ಕಳಿಗೆ ಅರ್ಥವಾಗುವಂತೆ ಕಥೆಗಳನ್ನು ಹೇಳಿ ಅವರ ಸಹಜ ಅಭಿನಯ ವ್ಯಕ್ತಗೊಳ್ಳುವಂತೆ ಮಾಡುವುದು ಅವಶ್ಯ ಅನ್ನುವುದು... ಅವರ ನಾಟಕಗಳಲ್ಲಿ ಶಿಕ್ಷಣದ ವಿಚಾರಗಳು ಧಾರಾಳವಾಗಿವೆ.... ಮಕ್ಕಳಿಗೆ ನಾಟಕವನ್ನು ಕೊಟ್ಟು ಪಕ್ಕದಲ್ಲಿ ದೊಡ್ಡವರು ಸುಮ್ಮನೆ ಕುಳಿತರೆ ದೊಡ್ಡವರು ಅರಿಯದಂತೆ ಅಲ್ಲೊಂದು ಗುಡುಗುಡು ಗುಮ್ಮಟ ಪ್ರತ್ಯಕ್ಷರಾಗಿಸುತ್ತಾರೆ... ಆಗ ಆ ನಾಟಕಅವರದಾಗುತ್ತದೆ.. ಅಂತಹ ಒಂದು ಅದ್ಭುತ ಕಲಿಕೆಗೆ ಕಾರಣಕರ್ತರು ಮೂರ್ತಿ ದೇರಾಜೆ ಯವರು....


ಅದೊಂದು ನಾಟಕ ಪ್ರದರ್ಶನ... ಸೂತ್ರದಾರನ ಸೂತ್ರದೊಳಗಿದ್ದ ಗೊಂಬೆಗಳು ಸೂತ್ರ ಕಡಿದು ದಿಕ್ಕು ಪಾಲಾಗಿ ಓಡುತ್ತವೆ... ಸಭಿಕರೊಂದಿಗೆ ಕ್ಷಮೆ ಕೋರಿದಸೂತ್ರಧಾರ ಗೊಂಬೆಗಳನ್ನು ಗದರಿ,ಅನುನಯಿಸಿ ಕರೆದರೂ ಅವುಗಳು ಬಾರದೆ, ತಾವೇ ನಾಟಕ ಮಾಡುವುದಾಗಿ ತಿಳಿಸುತ್ತವೆ... ಗೊಂಬೆಗಳಿಗೆ ಸವಾಲೊಡ್ಡಿದ ಸೂತ್ರದಾರ ಬದಿಗೆ ಸರಿಯುವನು.... ಆಗ ಬೊಂಬೆಗಳು ಸ್ವತಂತ್ರವಾಗಿ ನಾಟಕವಾಡುವವು....

ವಿಕ್ಕಿ ಎಂಬ ಆಡಿನ ಮರಿ ದೊಡ್ಡ ರಜೆಯಲ್ಲಿ ಕಾಡಿಗೆ ಹೋಗಲು ಆಸೆ ಪಡುತ್ತದೆ... ಅಮ್ಮ, ಯಾರನ್ನಾದರೂ ಜೊತೆಯಲ್ಲಿ ಕರೆದುಕೊಂಡು ಹೋಗು ಎಂದಾಗ, ಮಿಕ್ಕಿ ತನ್ನ ಜೊತೆಗಾರರಾದ ಕೋಳಿ ಮರಿ, ನಾಯಿ,ಬೆಕ್ಕು, ಕಾಗೆ, ದನ, ಕತ್ತೆ, ಹಂದಿ,ಮಂಗ, ಆನೆ ಎಲ್ಲರೊಡನೆಯೂ ಜೊತೆಗೂಡಲು ಕೇಳಿಕೊಂಡಾಗ ಎಲ್ಲವೂ ನಿರಾಕರಿಸುತ್ತವೆ....ಕೊನೆಗೆ ಚಿಟ್ಟೆಗಳು ಜೊತೆಗೂಡಲುಒಪ್ಪಿ ಮಿಕ್ಕಿ ಕಾಡೆಲ್ಲ ನೋಡಿ ಅಜ್ಜಿ ಮನೆಗೆ ಹೋಗಲು ಚಿಟ್ಟೆಗಳೊಂದಿಗೆ ಹೊರಡುತ್ತದೆ... ದಾರಿಯಲ್ಲಿ ತಿನ್ನಲೆಂದು ಮಿಕ್ಕಿಯ ಅಮ್ಮ ಚಕ್ಕುಲಿ ಮಾಡಿಕೊಡುತ್ತದೆ...


ನರಿ,ತೋಳ,ಹುಲಿ, ಕರಡಿ,ಸಿಂಹ ಎಲ್ಲವೂ ಒಂದೊಂದಾಗಿ ದಾರಿಯಲ್ಲಿ ಸಿಕ್ಕಿ ಮಿಕ್ಕಿಯನ್ನು ಕೂಡಲೇ ತಿನ್ನುವುದಾಗಿ ಹೆದರಿಸಿದಾಗ, ತಾನು ಅಜ್ಜಿ ಮನೆಗೆ ಹೋಗಿ ಉಂಡೆ ಕಡುಬು ತಿಂದು ದಪ್ಪವಾಗಿ ಬರುವುದಾಗಿಯೂ, ಸದ್ಯದ ಹಸಿವು ನೀಗಲು ಚಕ್ಕುಲಿ ತಿನ್ನಲು ಕೊಟ್ಟು ಅವುಗಳಿಂದ ತಪ್ಪಿಸಿಕೊಂಡು ಅಜ್ಜಿ ಮನೆ ಸೇರುತ್ತದೆ....


ಈ ನಡುವೆ ನಮ್ಮ ಸೂತ್ರಧಾರ ಬಂದು ಅಚ್ಚರಿ ವ್ಯಕ್ತಪಡಿಸಿ ಬದಿಗೆ ಸರಿದು ಹೋಗುವನು... ರಜೆ ಮುಗಿದು ಮಿಕ್ಕಿ ಪುನಹ ಹಿಂತಿರುಗುವ ವೇಳೆಗೆ ಅಜ್ಜಿಯ ಉಪಾಯದಂತೆ ಮಿಕ್ಕಿ ಡೋಲ್ ಒಳಗೆ ಕುಳಿತುಕೊಂಡು, ಗಾಳಿರಾಯನಿಂದ ನೂಕಿಸಿಕೊಂಡು ಚಿಟ್ಟೆಗಳೊಂದಿಗೆ ಬರುತ್ತದೆ...


ಬರುವಾಗ ದಾರಿಯಲ್ಲಿ ಗಾಳಿರಾಯ -ಗುಡು ಗುಡುಗು ಮಠ ದೇವರಿಗೆ ..ಚಿಟ್ಟೆಗಳು -ದಾರಿ ಬಿಡಿ ದಾರಿ ಬಿಡಿ....ಎಂದು ಹೇಳುತ್ತಾ... ಬರುತ್ತವೆ ...ಮೊದಲಿನಂತೆ ಅಡ್ಡ ಕಟ್ಟಿದ ಸಿಂಹ, ಕರಡಿ,ಹುಲಿ,ತೋಳಗಳು ಹೆದರಿ " ಆಡಿನ ಮರಿ ಎಲ್ಲಿ" ಎಂದು ಕೇಳಿದಾಗ ಡೋಲಿನೊಳಗಿಂದ "ಆಡು ಅಲ್ಲಿ ಆಡುತ್ತಿದೆ ಡೋಲು ಇಲ್ಲಿ ಓಡುತ್ತಿದೆ ಗುಡು ಗುಡು ಗುಮ್ಮಟ ದೇವರಿಗೆ ದಾರಿ ಬಿಡಿ" ಎಂದು ಆಡಿನ ಮರಿ ಹೇಳಿದಾಗ ಎಲ್ಲ ಪ್ರಾಣಿಗಳು ಹೆದರಿ ಓಡುತ್ತವೆ....


ಕೊನೆಗೆ ನರಿ ನಂಬದೇ ಡೋಲಿನ ಚರ್ಮವನ್ನು ಕಿತ್ತು ಆಡಿನ ಮರಿಯನ್ನು ಹಿಡಿಯಲು ಯತ್ನಿಸಿದಾಗ, ಆಡಿನ ಮರಿ ಇನ್ನೊಂದು ಬದಿಯಿಂದ ತಪ್ಪಿಸಿಕೊಂಡು ಓಡಿ ಹೋಯಿತು... ಗಾಳಿರಾಯ ನರಿಯನ್ನು ಸುತ್ತಿ ತಿರುಗಿಸಿ ದೂರ ಅಟ್ಟಿ ಓಡಿಸುತ್ತಾನೆ... ಮಿಕ್ಕಿ ಚಿಟ್ಟೆ,ಗಾಳಿರಾಯನೊಂದಿಗೆ ಮನೆಗೆ ಮರಳಿತು.... ಸೂತ್ರದಾರ ಸಂತೋಷದಿಂದ ಗೊಂಬೆಗಳನ್ನು ಪ್ರಶಂಸಿಸಿ ಸೂತ್ರವನ್ನು ಎತ್ತಿ ಎಸೆಯುವಲ್ಲಿಗೆ ನಾಟಕ ಮುಕ್ತಾಯವಾಗುತ್ತದೆ....

ಮಕ್ಕಳನ್ನು ಸೂತ್ರದ ಗೊಂಬೆಗಳಾಗಿಸದೇ ಅವರಿಂದ ಸಹಜ ಅಭಿನಯವನ್ನು ಮಾಡಿಸುವುದು ಅಗತ್ಯ ಎನ್ನುವುದು ಈ ನಾಟಕದ ಆಶಯ.... ಈ ನಾಟಕವನ್ನು ಅರೇಳು ವಯಸ್ಸಿನ ಮಕ್ಕಳಿಗೆ ಕಲಿಸಿ ಮಾಡಿಸಬಹುದು..... ಹೀಗೆ ಇನ್ನಷ್ಟು ನಾಟಕಗಳು ಅವರಿಂದ ಮೂಡಲಿ...


ವರಲಕ್ಷ್ಮಿ ಪರ್ತಜೆ....

7 views0 comments