top of page

ಹೂವಿನೊಡನೆ. . . . .

ನಿಮಗೇಕೆ ಮಾರ್ದವದ ಆರ್ದ್ರ-ಭಾವ?

ಸಾನಂದವೆಮ್ಮೆದೆಯ ಸ್ಪಂದ-ಜೀವ

ನಿಮಗೇಕೆ ಕೋಮಲದ ವಿಮಲ ರೂಪ?

ಭೂ-ಮಾತೆ ಬೆಳಗಿಸಿದ ಆತ್ಮದೀಪ


ಗಗನಮಂಡಲದೆಲ್ಲ ಮಿನುಗು-ಮೊಗ್ಗು,

ನಮ್ಮದೇ ಪ್ರತಿಬಿಂಬ ಕಂಡು ಹಿಗ್ಗು

ಘನತಿಮಿರ ಮಧ್ಯದಲು ಕಾಂತಿ-ಬಿಂದು,

ನಮ್ಮೆದೆಯ ಮಿಡಿತವದು ನಿತ್ಯವಿಂದು


ವ್ಯೋಮವಿದೆ ವ್ಯಾಪ್ತ ವಿಕಸಿಸಲು ಹಾಗೆ,

ಬುವಿಯೊಡಲ ಘನಭೂಮ ವ್ಯೋಮವೆಮಗೆ

ಶಕ್ತಿಯಲಿ ಹೊಳೆಹೊಳೆವ ಭವ್ಯ-ಕಾಂತಿ,

ಪ್ರೇಮದಲಿ ತುಂಬಿರುವೆ ದಿವ್ಯ-ಶಾಂತಿ


ಕತ್ತಲನು ಓಡಿಸಲು ಬಿತ್ತಿರುವ ಬೀಜ,

ಅರಳುತಿರೆ ಪೂರ್ಣ ವರ್ಣವದು ಓಜ

ವಿಶ್ವಶಕ್ತಿಯ ಕೃಪೆಯ ದೀಪ ಸಾಲದು ತಾನು,

ಬೇರು ತಾ ದೃಷ್ಟಿಸಿದ ಪರಮ ಸತ್ಯವು ನಾನು


ಪ್ರಖರ ಸೂರ್ಯನ ಕಂಡು ಬೆದರಿ ಅಡಗಿದವೇನು?

ರೆಪ್ಪೆವಡೆಯದೆ ಅವನ, ಎದೆ ತುಂಬಿಕೊಳುವೆ ನಾನು


-ಪುಟ್ಟು ಕುಲಕರ್ಣಿ

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comments


©Alochane.com 

bottom of page