ಶಿವನು ಉಗ್ರ
ತಪಸ್ಸಿಗೆ ಕುಳಿತಿರಲು
ಕಾಮನು ಆಡಿದ ಆಟವನು
ತಪಸ್ಸಿಗೆ ಭಂಗ
ಬಂತೆಂದು
ಶಿವ ತೆರೆದ ಉರಿಗಣ್ಣನ್ನು
ಬೆಂಕಿಗೆ ಬೆಂದು
ಸುಟ್ಟು ಬೂದಿಯಾದ
ರತಿದೇವಿಯಾದಳಳು ವಿಧವೆ
ಬೇಡಿದಳವಳು
ಶಿವನನ್ನು
ತನ್ನ ಪತಿಯ ಬದುಕಿಸೆಂದು
ತಾನಿತ್ತ ಶಾಪವ
ಹಿಂದಕೆ ಪಡೆದರೆ
ಅವಮಾನವೆಂದ ಶಿವ
ರತಿಯು ಅಳುತಲೆ
ಕುಳಿತಿರಲು
ಮೂಡಿತು ಶಿವನಿಗೆ ಕರುಣೆ
ಲೋಕವು ನಿನ್ನ
ಪತಿಯನು ಸ್ಮರಿಸಿ
ಪೂಜಿಸುತಲಿರಲೆಂದ
ವರುಷಕ್ಕೊಮ್ಮೆ
ಕಾಮನು ಹುಟ್ಟಿ
ಮತ್ತೆ ಸುಟ್ಟು ಬೂದಿಯಾಗುವನು
ನಮ್ಮಲ್ಲಿರುವ
ಕಾಮನೆಳನು
ಸುಡಬೇಕೆಂಬುದೇ ಒಳಗುಟ್ಟು
ವೆಂಕಟೇಶ ಹಣಶಿಕಟ್ಟಿ
ಒಂದಿಲ್ಲೊಂದು ಚಟುವಟಿಕೆಯಲ್ಲಿ ಸದಾಕಾಲ ಕ್ರಿಯಾಶೀಲರಾಗಿರುವ ಪ್ರೊ.ವೆಂಕಟೇಶ ಹುಣಶಿಕಟ್ಟಿ ಅವರು ಮಕ್ಕಳ ಕವಿಗಳಾಗಿಯು ಪ್ರಸಿದ್ಧರು. ಅವರು ಮಕ್ಕಳಿಗಾಗಿ ಬರೆದಿರುವ "ಹೋಳಿ ಹಬ್ಬ" ಕವನ ನಿಮ್ಮ ಓದಿಗಾಗಿ.
ಡಾ.ಶ್ರೀಪಾದ ಶೆಟ್ಟಿ ಸಂ.ಆಲೋಚನೆ.ಕಾಂ
Comentários