ಕಾಡಿನ ತುಂಬ
ಹಾರುವ ಹಕ್ಕಿ
ಮರಗಳ ಲೆಕ್ಕ ಗೊತ್ತೆನು?
ಹಸಿರಿನ ಮರೆಯಲಿ
ಹಾರುತ ಹಾರುತ
ಗೂಡನು ಮರೆತರೆ ಗತಿಯೇನು?*
ಹಗಲಲಿ ಹಾರುತ
ಕಾಳನು ಹುಡುಕುವೆ
ಏತಕೆ ದೂರ ಯಾಕಷ್ಟು?
ದಿನವೂ ಹಾಡುತ
ನನ್ನೊಡನಿದ್ದರೆ
ಕಾಳನು ಕೊಡುವೆ ಸಾಕಷ್ಟು?
ಗಾಳಿಯು ಬಂದರೆ
ಹಾರದ ನೀನು
ರೆಕ್ಕೆಗಳೇತಕೆ ಅಡಗಿಸುವೆ?
ಕಾವನು ಕೊಟ್ಟು
ಮರಿಗಳ ಹೆತ್ತು
ಹಾರಲು ಹೇಗೆ ತೊಡಗಿಸುವೆ?
ಪಿ.ಆರ್. ನಾಯ್ಕ.ಹೊಳೆಗದ್ದೆ
Comments