ಆನಂದ ಸಂವತ್ಸರದೆ
ಮಾವಿನ ಚಿಗುರಿನ ಎಳೆ ತಳಿರಲಿ
ವಸಂತ ಗಾನವು ಹಾಡಿಹುದು
ಹೊಸ್ತಿಲ ಹುಣ್ಣಿಮೆಯ ಕಳೆದು ಬರುವ ಪಂಚಮದಲಿ
ತೂಗುತಿಹ ತಂಗಾಳಿ
ಸೂರ್ಯನುದಯಿಸಿ ತಾನಿಂದು
ನಭದ ಹೊಸಲಿನ ಮೇಲೆ
ಹೇಮಂತ ಋತುವಿನೊಲು
ಗಗನದ ಮಣಿಮುಕುಟನಾಗಿ
ಕೆಂಕಿರಣಗಳ ಸುತ್ತಿಟ್ಟು ಬೆಳಗಿದನು ನೀಲಾಂಬರದೆ ದೈವದಾಣತಿಯಂತೆ
ಎಳೆಎಳೆಯಾಗಿ ಕಳಚಿಹುದು
ಬಿಳಿಮಂಜಿನ ಹೊದಿಕೆಯು ಧರಣಿಗೊದಿಸಿದುದು ಕಣ್ದೆರೆಯಿತು
ಗಂಭೀರ ಭುವಿಯ ನಿತ್ಯಬಾಳು
ನಸುಗೆಂಪಿನೊಳು ವಿಹಂಗಗಳ
ನಿತ್ಯ ಕೂಜನ ಧರೆಗವತರಿಸಿತ್ತು
ಬೆಳಗಿನ ರಸಮಂಜರಿಯನೇರ್ಪಡಿಸಿತ್ತು
ಶಾಂತದೇವತೆಯಾಗಿ ತಿಳಿಬಣ್ಣದೆ
ಮೂಜಗವಂದಿತನಾಗಿ ಪೂರ್ವಾಂಬರದ ಕಡಲಿನಲಿ
ಕೆಂಪಿನುಂಡೆಯಾಗಿ ತೊಳಗಿ ಬೆಳಗಿದ ಉದಯರವಿ ಚೇತನವ ತುಂಬಲು ಜಗಕೆ,ಶೀತಲ ಕೋಮಲ ಕಂಪಿನೊಳಗಿಂಪನು ತುಂಬಲು ತಣ್ಣೆಳಲು,ಕಣ್ಣ ಹರಿಸಿದೆಡೆ ಸಿರಿಹಸಿರು ವಸಂತದೊನಲು..
ಬಂದನಾ ಶಿಶಿರ ಋತು ಕೆನೆಗಡಲ ಮೇಲೇರಿ.
ಲಕ್ಷ್ಮಿ ದಾವಣಗೆರೆ