ಹುಣ್ಣಿಮೆಯ ಕೂಸು

ಆಕಾಶದ ತೊಟ್ಟಿಲೊಳಗೆ

ಹುಣ್ಣಿಮೆ ಶಶಿ ಕೂಸು!

ಬಿಳಿಯ ಮುಗಿಲ ಕೌದಿ ಸರಿಸಿ

ಬೆಳದಿಂಗಳ ತೊದಲು!:


"ವಾರದಾಚೆ ದೂರ ನಿಂತು

ಕೋಟಿ ತಾರೆ ಸಖರು,

ಆಟಕೆಂದು ಕರೆದರವರು

ಎಲ್ಲ ಎತ್ತ ಹೋದರು!?"


ಮೋರೆ ತುಂಬ ನಗೆಯ ಬೆಳಕು!

ಮೆಲ್ಲ ಸುತ್ತ ಹರಡಿ,

ಚುಕ್ಕಿ ಸಖರು ಕೂಡುತಾಡೆ

ಬರುವರೆಂದು!? ನೋಡಿ.


"ಮಲಗಿ ಇಹುದು ತುಂಟ ಕಂದ!"

ಭೂಮಿ ಕಣ್ಣ ಮುಚ್ಚೆ;

"ಅಮ್ಮಾs!" ಎನುತ ಮುಗಿಲ ಹೊದಿಕೆ --

--ಸರಿಸಿ,ಮೋರೆ ಆಚೆ!

ಹುಣ್ಣಿಮೆಯ ಕೂಸು!


--ಗಣಪತಿ ಗೌಡ,ಹೊನ್ನಳ್ಳಿ

ಅಂಕೋಲಾ

52 views0 comments