top of page

ಹೆಣ್ಣು? [ಕವನ]

ಮಾತು ಮಾತಿಗೂ ಹೇಳುವ ಪುರುಷ ,

ನಾನು ಗಂಡು ,ಗಂಡಲ್ಲವೇ?

ಪ್ರತಿ ಮಾತಿಗೂ ದೂರುವ ಪುರುಷ ,

ನೀನು ಹೆಣ್ಣು ಹೆಣ್ಣಲ್ಲ ವೆ?


ಪ್ರತಿ ಪುರುಷಗು ಹೊತ್ತು ಹೆತ್ತವಳು ,

ಅಸ್ತಿತ್ವ ಕೊಟ್ಟವಳು , ಹೆಣ್ಣು,ಹೆಣ್ಣಲ್ಲ ವೆ?


ನೀ ತೋರಿದ ಜಗಕೆ ನೀನು ದೂರಲ್ಲವೆ?

ಅಂದರು,ಬೆಂದರು,ನಿಂದಿಸಿದರು,

ಕರಗುವ ಮೇಣ ದಂತೆ ನಿನ್ನ ಬದುಕಲ್ಲ ವೆ?


ಇದ್ದರೂ ಇಲ್ಲ ದಂತೆ ನೋವು ದುಃಖವ ನುಂಗಿ ,

ಕಾಣದ ಕೈಗಳ ಹಿಂದೆ ,

ನೊಂದು ಬೇಂದವಳು

ಎಂದಿಗೂ..... ನೀನಲ್ಲವೇ,ನೀನಲ್ಲವೇ?.








ಉಮಾ ಡಿ ನಾಯ್ಕ

50 views0 comments

Kommentarer


bottom of page