top of page

ಹೆಡ್ ಮೇಡಮ್ ಅಂದ್ರೆ ಹೆಡ್ ಮೇಡಮ್

ಹೆಡ್ ಮೇಡಮ್ ಅಂದ್ರೆ ಹೆಡ್ ಮೇಡಮ್

ಬರ್ತಾ ಇದ್ರೆ ಗೇಟ್‍ನಲ್ಲೇ ಢಂ ಢಮಾರ್ ಢಮ್

ಬಲೂನೆಲ್ಲಾ ತಮ್ಮಷ್ಟಕ್ಕೆ ಒಡದ್ಹೋಗತ್ವೆ ಏಕ್‍ದಮ್

ಮೇಡಮ್ ಬರೋವರ್ಗೆ ಮಾತ್ರ ಹಾರಾಡಿಕೊಂಡಿರೋಕೆ ಫ್ರೀಡಮ್


ಯಾವ ಜಾದೂಗಾರನಿಂದ ಕೊಂಡು ತಂದ್ರೋ ಇದನ್ನ

ಮೇಡಮ್ಮೇ ಹಚ್ಚಿದ್ದಿದು ವನ ಮಹೋತ್ಸವದ ದಿನ

ಹೂವು ಹಣ್ಣು ಏನೂ ಇಲ್ಲ ಬಲೂನ್ ಬರಿ ಬಲೂನ್

ಬಣ್ಣ ಬಣ್ಣದ ದುಂಡನೆ ಉದ್ದನೆ ನಾನಾ ಸೈಜಿನ ಬಲೂನ್


ಅವರ ಬರೋವಾಗ ಅನಬೇಕಂತೆ ಢಮ್ಮಾರೆ ಢಮ್ ಢಮ್

ತಿಳಿದ್ಹೋಗ್ಬೇಕಂತೆ ಎಲ್ರಿಗೂ ಬಂದ್ರು ಮೇಡಮ್ ಮೇಡಮ್

ಎಲ್ಲಿದ್ರೂ ಅಲ್ಲೇ ಸುಮ್ನೆ ನಿಂತಬಿಡಬೇಕಂತೆ ಹಾಂ

ಸೆಲ್ಯೂಟ್ ಮಾಡಬೇಕಂತೆ ನಿಂತನಿಂತಲ್ಲೇ ಹೂಂ


ಮೇಡಮ್ ಆರ್ಡರ್ ಮಾಡಿದ ಹಾಗೇ ನಡಕೊಳ್ಳತ್ತೆ ಮರಾನೂ

ನಮ್ ಹಾಗೆ ಅದು ಅದು ಸೌಂಡ್ ಮಾಡಿಕೊಂಡು ದಿನಾನೂ !

ಬೇಜರಾದ್ರೂ ಬಲೂನಗೆಲ್ಲಾ ಕೇಳ್ತಾ ಇಲ್ಲ ದೇವರೂನೂ

ಹುಟ್ಟೋದೇ ಸಾಯೋಕಾ ? ಅಂತ ಅನಕೊಂಡು ಊಂ ಊಂ

ಢಮ್ ಢಮ್ ಢೂಮ್ !

ಆನಂದ ಪಾಟೀಲ್

22 views0 comments

Comentarios


bottom of page