top of page

ಹುಟ್ಟುಹಬ್ಬ

ದೇವರಿಗೆ ವಂದಿಸಿ

ಹಿರಿಯರಿಗೆ ನಮಿಸಿ

ಹೊಸ ದಿರಿಸು ಧರಿಸಿ

ಸಿಹಿ ತಿನಿಸು ಹಂಚಿ

ಶುಭಾಶಯ ಸ್ವೀಕರಿಸಿ

ಸಂಭ್ರಮಿಸಿದೆವು ಅಂದು!!


ಪೇಸ್ಟ್ರಿ- ಕೇಕ್...

ಝಗ ಮಗಿಸುವ ದೀಪ

ಆಡಂಬರ - ಅಲಂಕಾರ

ಕಾಣಿಕೆ - ಶುಭ ಹಾರೈಕೆ

ಫೋಟೋ ಕ್ಲಿಕ್ಕಿಸುವ ಭರಾಟೆ

ವಾಟ್ಸಪ್ಪ್ -ಸ್ಟೇಟಸ್ಗಳಲಿ

ಕಳೆದು ಹೋಗುತ್ತಿದ್ದೇವೆಯೇ

ಇಂದು????


ಸಾವಿತ್ರಿ ಶಾಸ್ತ್ರಿ, ಶಿರಸಿ

1 view0 comments

Comments


bottom of page