top of page

ಹೇಗಿರಬೇಕು ಮನೆಯ ವಾಸ್ತು? -ಅಟಲ್ ಬಿಹಾರಿ ವಾಜಪೇಯಿ ರಚಿತ

ಮನೆ ಬೇಕಾದರೆ ಹೇಗಾದರೂ ಇರಲಿ

ಆದರೆ ಅದರ ಒಂದು ಮೂಲೆಯಲ್ಲಿ

ಮನಬಿಚ್ಚಿ ನಗಲು ಒಂದಷ್ಟು ಜಾಗವಿರಲಿ..


ಸೂರ್ಯನು ಎಷ್ಟಾದರೂ ದೂರವಿರಲಿ

ಅವನಿಗೆ ಮನೆಗೆ ಬರಲು ದಾರಿಯಿರಲಿ..


ಒಮ್ಮೊಮ್ಮೆ ಮಾಳಿಗೆಯ ಹತ್ತಿ

ತಾರೆಗಳನ್ನು ಅವಶ್ಯವಾಗಿ ಎಣಿಸಿ..

ಸಾಧ್ಯವಾದರೆ ಕೈಚಾಚಿ

ಚಂದಿರನನ್ನು ಮುಟ್ಟಲು ಪ್ರಯತ್ನಿಸಿ..


ಮಂದಿ ಬಳಗವನ್ನು ಆಗಾಗ ಭೇಟಿಯಾಗುವಿರಾದರೆ

ಮನೆಯ ಅಕ್ಕಪಕ್ಕ ನೆರೆಹೊರೆ ಖಂಡಿತ ಇರಲಿ..


ಮಳೆಯಲ್ಲಿ ನೆನೆಯಲು ಬಿಡಿ,

ಜಿಗಿದು ಕುಣಿದಾಡಲು ಬಿಡಿ..

ಸಾಧ್ಯವಾದರೆ ಮಕ್ಕಳಿಗೆ ಒಂದು

ಕಾಗದದ ದೋಣಿ ತೇಲಿಬಿಡಿಲು ಬಿಡಿ..


ಎಂದಾದರೊಮ್ಮೆ ಬಿಡುವಿದ್ದಾಗ, ಆಕಾಶವು ಶುಭ್ರ ವಿರುವಾಗ

ಒಂದು ಗಾಳಿಪಟವನ್ನು ಆಕಾಶದಲ್ಲಿ ಹಾರಿಬಿಡಿ..

ಸಾಧ್ಯವಾದರೆ ಒಂದು ಪಂದ್ಯವೂ ಆಡಿ ಬಿಡಿ..


ಮನೆಯ ಮುಂದೆ ಒಂದು ಮರವಿರಲಿ

ಅದರ ಮೇಲೆ ಕುಳಿತ ಪಕ್ಷಿಗಳ

ಮಾತುಕತೆ ಅವಶ್ಯವಾಗಿ ಕೇಳಿರಿ..


ಮನೆ ಬೇಕಾದರೆ ಹೇಗಾದರೂ ಇರಲಿ

ಆದರೆ ಅದರ ಒಂದು ಮೂಲೆಯಲ್ಲಿ

ಮನಬಿಚ್ಚಿ ನಗಲು ಒಂದಷ್ಟು ಜಾಗವಿರಲಿ..


ಎಲ್ಲಿ ಬೇಕಾದರಲ್ಲಿ ಸುಳಿದಾಡಿ

ಹಾಗೆಯೇ ಅಲ್ಲೊಂದು ಸಿಹಿಯಾದ ಕೋಲಾ‌ಹಲವನ್ನು ಹರಡಿ..


ವಯಸ್ಸಿನ ಪ್ರತಿ ಘಟ್ಟವೂ ಆನಂದದಾಯಕ

ನಿಮ್ಮ ವಯಸ್ಸಿನ ಸಂಭ್ರಮವನ್ನು ಅನುಭವಿಸಿ..


ಜೀವಂತ ಹೃದಯವಿರಲಿ ಸ್ವಾಮಿ

ಆ ಮೊಗದಲ್ಲಿ ಉದಾಸೀನತೆ ಏಕೆ?

ಸಮಯ ಹೇಗೂ ಕಳೆದು ಹೋಗುತ್ತಿದೆ

ವಯಸ್ಸಿನ ಲೆಕ್ಕವದು ಹಾಳಾಗಿಹೋಗಲಿ..


Shreepad Hegde Salkod

12 views0 comments

Comments


bottom of page