ಹರಿಯುವಂತೆ ಧೂಪ

ಹರಿಯುವಂತೆ ಧೂಪ

ಉರಿಯುವಂತೆ ದೀಪ

ಸರಿದುವೆಷ್ಟೊ ಹಿರಿಯ ಜೀವ

ನಿಲಿಸಿ ಮಧುರ ನೆನಪ


ಜನಿಸಿದಂದಿನಿಂದ ನದಿ

ಉಣಿಸಾದರು ಕಡಲಿಗೆ

ಕಡಿಯದೆ ಇದೆ ಅದರ ಧಾರೆ

ಕಡೆಯೆಲ್ಲಿದೆ ಬದುಕಿಗೆ?


ಅಳಿಸಿದೆ ನಿಜ ಕಾಲ

ಬೆಳೆಸಿದೆ ಬಾಳೆಲ್ಲವ,

ಆದರೇನು ತಡೆಯಬಹುದೆ

ಬಾಳಿನ ಚಿರಚಲನವ?


ಸಾಗುವವರೆ ಎಲ್ಲರು

ಸಾಗಿದಂತೆ ಹಿರಿಯರು,

ಮಾಗಿ ಬಂದರೇನು ಮತ್ತೆ

ಚಿಗುರು ನಕ್ಕೆ ನಗುವುದು.


ಡಾ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರು

0 views0 comments