top of page

ಹನಿ ಕವಿತೆಗಳು

ಮರದಡಿ..

---------------

ಬೃಹತ್

ಮರದಿಂದ

ದೂರ

ಸಿಡಿದಾಗಲೇ

ಬೀಜಕ್ಕೆ

ಮೊಳೆ-ಬೆಳೆಯುವ

ಭಾಗ್ಯ;

ಅಡಿಯಲ್ಲೇ

ಮಿಡಿದರೆ,

ನೆರಳು-ಮರಸೇ

ಮುರುಟಿಸುವ

ದೌರ್ಭಾಗ್ಯ.

ಡಾ. ಬಸವರಾಜ ಸಾದರ.

--- + ---

[ಸಮಧರ್ಮ

-----------

ಥಳಕಿರುವಲ್ಲಿ

ಮಾತ್ರ

ಬೆಳಕು

ಬೀರುವುದಿಲ್ಲ,

ಸೂರ್ಯ;

ಧರ್ಮ,

ದೇವರು,

ರಾಜಕಾರಣ-

ಎಲ್ಲವೂ

ಅನುಸರಿಸಬೇಕು,

ಈ ಸಮಧರ್ಮ

ಕಾರ್ಯ

ಡಾ. ಬಸವರಾಜ ಸಾದರ.

--- + ---

1 view0 comments

Comentarios


bottom of page