ಹದ್ದು ಹಾರುತಿದೆ ನೋಡಿದಿರಾ

ಹದ್ದು ಹಾರುತಿದೆ ನೋಡಿದಿರಾ

ರಾಜಕೀಯದಾ

ಹದ್ದು ಹಾರುತಿದೆ ನೋಡಿದಿರಾ


ಸದ್ದಿಲ್ಲದೆ ಬಂದೆರಗುತ ಕುರ್ಚಿಯ

ಕದ್ದೊಯ್ಯುವ ಕೆಂಗಣ್ಣಿನ ನರ-ರಣ-

ಹದ್ದು ಹಾರುತಿದೆ ನೋಡಿದಿರಾ


ಸುಳ್ಳನು ಹೇಳುತ ಮೋಸವ ಮಾಡುತ

ಕೋಟಿ ಕೋಟಿ ಹಣ ಚೆಲ್ಲುತ ಜನರಾ

ಮರುಳು ಮಾಡಿ ಮತ ಗಳಿಸುವ ಭೀಕರ

ಹದ್ದು ಹಾರುತಿದೆ ನೋಡಿದಿರಾ


ನೀತಿಯ ಮಾತನು ಆಡುತ, ಶಕುನಿಯ

ತಂತ್ರವ ರಚಿಸುತ ಬೆನ್ನಿಗೆ ಇರಿಯುವ

ಬಡವರ ಉದ್ಧಾರದ ಹೆಸರಲ್ಲಿಯೆ

ತನ್ನುದ್ಧಾರವ ನೋಡುವ ವಂಚಕ

ಹದ್ದು ಹಾರುತಿದೆ ನೋಡಿದಿರಾ


ಅಧಿಕಾರದ ಮದದಲ್ಲಿಯೆ ಮೆರೆಯುವ

ಮತ ಹಾಕಿದ ಜನರನ್ನೇ ಮರೆಯುವ

ಹಗಲುದರೋಡೆಯ ಮಾಡುತ ತಮ್ಮಯ

ಬೊಕ್ಕಸ ಭರ್ತಿಯ ಕೆಲಸವ ಮಾಡುವ

ಹದ್ದು ಹಾರುತಿದೆ ನೋಡಿದಿರಾ

( ಬೇಂದ್ರೆಯವರ ಕ್ಷಮೆ ಕೋರಿ)

- ಎಲ್ಲೆಸ್
17 views0 comments