ಹಗಲಾವುದು?
ರಾತ್ರಿ ಯಾವುದು?
ಝಗಮಗಿಸುವ ಬೆಳಕು
ಹೀಗಾಗಿ
ರಾತ್ರಿ ನಡೆಯುವುದೆಲ್ಲ
ಹಗಲಿಗೂ ಮೀಸಲು
ನಿಶಾಚರಿಗಳಿಲ್ಲ
ಗೂಬೆ ಗಲಾಟೆಯಿಲ್ಲ
ನಾಯಿಗಳು ಬೊಗಳುತಿವೆ
ಅಷ್ಟೇ
ಕೆಲಸ ಹಾಗೇ
ರಾತ್ರಿ ಪಾಳೆಯ
ಹಗಲಿಡೀ ನಿದ್ರೆ
ಬದಲಾಗಿದೆ
ಜೈವಿಕ ಗಡಿಯಾರ
ಹೇಗಿರಬೇಡ ಆರೋಗ್ಯ?
ಹಣ !
ಹಣ !
ಬೇಕು
ಉಳಿದದ್ದು ಗೌಣ !
ಗಂಡ
ಹಗಲು ನಿದ್ರೆಗೆ ದಾಸ
ಹೆಂಡತಿ
ಆಫೀಸ್ ಗೆ
ಸಂಸಾರ-----?
ಸಾಗಿದೆ ಹೀಗೇ----!
* ಪ್ರೊ.ವೆಂಕಟೇಶ ಹುಣಶೀಕಟ್ಟಿ
ความคิดเห็น