ಬಿರಿದ ಹೂ ಗಂಧಕ್ಕೆ ಮಾಲಕರು ಯಾರಿಹರು?
ಚಂದಕ್ಕೂ ಹಾಗೇ!
ಕುಡಿನೆಟ್ಟು ನೀರೆರೆದು
ಕಟ್ಟಿ ಬೇಲಿಯ ಗಟ್ಟಿ
ಬೆಳೆಸಿದವರೂ ಕೂಡ,
'ಗಂಧದ ಚೆಂದದ
ಮಾಲಕನೋ ಮಾಲಕಿಯೋ'
ಅಂದರೇ......
ಹೂವೂ ಕಿಸಕ್ಕನೆ ನಕ್ಕರೂ ನಕ್ಕೀತು!
ಬುಡ ನೆಲಕೆ
ಗಿಡ ಮೇಲೆ
ನೀರು ಸಾರ ಕೊಟ್ಟ ಬೇರೆಂಬೋ ತಾಯಿ!
ದಂಟಿನ ಅಂಚಿಗೇ ಅರಳೀ ನಿಂತ ಹೂವ,
ಅಂದಕ್ಕೆ,
ಒಡಲ ಗಂಧಕ್ಕೆ
ನಿಜವಾಗಿ ಒಡತೀಯೋ
ಒಡೆಯನು ಯಾರೋ!?
ಯಾರು?
ಹೇಳಲುಬಹುದೇನು ಯಾರೂ!?
ಗಣಪತಿ ಗೌಡ,ಹೊನ್ನಳ್ಳಿ, ಅಂಕೋಲಾ
Comments