ಬದುಕಿನಾರ್ಭಟದೊಳ್
ಬಾಗಿಹನೈ ಮುದುಕನಂತೆ
ಹೊಸಕಿ ಹಾಕಿತೇನ್ ಹಣೆಬರಮು
ಬದುಕ ಬವಣೆಗಳೊಳಗೆ
ಉರಿದುರಿದು
ಬಾಳ್ಗೊನೆಯು ಬರಿದಾಯಿತೆ ?
ಸುರಿಸುರಿದುವೇನ್ ಹಳತ
ಹಣೆಇಳಿದು ಎದೆವರೆಗೆ
ಮಡುಗಟ್ಟಿತೇನ್ ತುಡಿಪ ರಕ್ತಂ!!
ಎಳೆಮೆಳೆದು ದೂರದೂರಿಂಗೆ ಪುಂಡಿಯ ಬಂಡಿಯನ್
ಪುಡಿ ಪುಡಿಯೊಳ್
ಬದುಕನ್ ಹಿಡಿದಿಡುತೆ
ಪುಡಿಗಾಸೇ ಅನ್ನಂ! ವಸ್ತ್ರಂ !!
ಎಡರು-ತೊಡರುಗಳೇನ್
ಪರ್ವತವೇನ್
ಮನಸಿರಲ್ ಮಾರ್ಗಂಗಳೆಂಟು ಇರ್ಕುಂ!
ಸ್ವಾಭಿಮಾನಂ ಬದುಕಾಗಿರಲ್
ಅದಾವ ಅರ್ಥಮುಂ ಕೀಳಲ್ಲ
ಎಂದನೈ
ಹುಲುಮಾನವ ಸಾರ್ತಕತೆಯೊಳ್ !!!
*ಕೇಶವ ಭಟ್ಟ , ಚಿಮ್ನಳ್ಳಿ.
Comments