ಭಾವಗಳ
ಸ್ವಾತಂತ್ರ್ಯದ
ಖುಷಿಯಲ್ಲಿ
. ಹುಟ್ಟಿದ
ಕವಿತೆ ಮಾತ್ರ
ಅತಂತ್ರ.
ಕಟ್ಟುಪಾಡುಗಳ
ಕೋಳ,
. ತೊಡಿಸಿ ಕತ್ತಲ
ಬಂದೀಖಾನೆಯಲ್ಲಿ
ಬಂದಿ
. ಕೇಳುವರಾರಿಲ್ಲ
ಗೋಳ,
ಒಂಟಿ,ಪಾಪ
ಬಿಡುಗಡಗೆ
ಚಡಪಡಿಸಿ
ಮುಚ್ಚಿದ ಬಾಗಿಲು
ಸ್ವಲ್ಪ ಓರೆಯಾದರೆ
ಸಾಕು
ಬೆಳಕ ಬಯಲಿನ
ಸ್ವಚ್ಛಂದಕ್ಕೆ
ಜಿಗಿಯುವ
ಅವಸರಕ್ಕೆ
ಸಿಲುಕಿಕೊಂಡರೆ
ಸಂಧಿಯಲ್ಲಿ
ಒಳಗರ್ಧ
ಕತ್ತಲಲ್ಲಿ ಅತಂತ್ರ
ಉಳಿದರ್ಧ
ಬಯಲ ಬೆಳಕಲ್ಲಿ
ಸ್ವಾತಂತ್ರ್ಯದ
ಕವಿತೆ.."ಪಾ..ಪ"!!!!
--ಅಬ್ಳಿ,ಹೆಗಡೆ.
Comments