
ವಿಸ್ತಾರವಾಗಿ ಹರಿವ ನದೀ ! ನದೀ ಪಾತ್ರ... ಭವ್ಯ ಸಂಜೆ, ಮಲೆನಾಡಿನ ಸಂಜೆಯ ನದಿ ತುಂಬಿಸಲೆಂಬಂತೆ ಸುರಿದ ಮಳೆ ! ಮಳೆ ಕಳುಹಿದ ಬಳಿಕ ಭೌವ್ಯವಾಗಿ ಹಾಜರಾದ ಸೂರ್ಯ ಕಣ್ಣಿನಲ್ಲೇ ಸೂಚಿಸುವ ತಪ್ಪದೆ ನಾಳೆ ಬರುವೆನೆಂದು, ನನಗಾಗಿ ಕಾದಿರೆಂದು ವೀಕ್ಷಕನಿಗೇಳುತ್ತಾ ಮಳೆಗೆ ನೆನೆದ ಸಂಜೆಯನು ಕೈ ಕುಲುಕಿ ಬೀಳ್ಕೊಡುವನು ತೆರೆಮರೆಗೆ ಕೆಂಕಿರಣಗಳ ಸೂಸುತ್ತ ಕಣ್ಣು ತಣಿಸುವ ಆಕಾಶದ ಬಣ್ಣ ಗಳೊಂದಿಗೆ ಆಕಾಶದೂರಿನ ಸೂರ್ಯ ಸಂಜೆಯ ಕಾಯಕ ಮುಗಿಸಿ ರಶ್ಮಿಗಳನ್ನು ತನ್ನೊಳಗೆ ಕೊಡೆಯಂತೆ ಮಡಿಚಿಟ್ಟುಕೊಂಡು ಕೆಂಪಾಗಿ ಮುಳುಗುತ್ತಾನೆ ನದಿಯ ತಟದಲಿ ಸೂರ್ಯನ ಕಾಂತಿಯನ್ನು ಬೆಳಗಿನಲಿ ಭೇಟಿಯಾಗುವ ನಿರೀಕ್ಷೆಯಲವನು ಏಕಾಂತದಿ ನದಿಯ ಕುಶಲ ಕೇಳುತ್ತಿರುವ ವೀಕ್ಷಕ ಮತ್ತು ಪ್ರಕೃತಿಯರು, ಭವ್ಯ ಸೂಬಗಿನಲಿ ನೀರವದಿ ಹರಿಯುತಿಹ ಭದ್ರೆ ಒಬ್ಬರಿಗೊಬ್ಬರು ಬೀಳ್ಕೊಡುತ್ತಾರೆ. -ಲಕ್ಷ್ಮೀ ದಾವಣಗೆರೆ