top of page

ಸಾರ್ಥಕ್ಯದ ಸಮಾಧಿ [ಕವನ ]

- ಗೋಪಾಲಕೃಷ್ಣ ಹೆಗಡೆ ಕಲಭಾಗ.


ನಿಮ್ಮಂತೇ ಇದ್ದವಳು ನಾನು

ಸಂಸಾರ, ಬಸಿರು, ಬಾಳಂತನ

ಪಾಲನೆ-ಪೋಷಣೆ, ನೆರಳು-ಆಶ್ರಯ

ಬೆಳೆಸುತ್ತ-ಬೆಳೆಯುತ್ತ ನಿತ್ಯ ಕರ್ತವ್ಯ

ಕಾಲ-ಋಣ-ಹಣೆಬರಹವಿದು

ಆರೋಪವಿಲ್ಲ ವಿಧಿ ಬರೆದುದು

ಮಿಗಿಲೆಂಬ ಭಾವ ಬಾಗಿ ಕುಗ್ಗಿ

ಕೀಳರಿಮೆಯ ಕಳೆದೆ ಮಾಗಿ ಹಿಗ್ಗಿ

ಗೊತ್ತೆನಗೆ ಆ ಹಸಿ-ಹುಸಿಯ ಬಾಳು

ಗಹಗಹಿಸುವ ಗೆಲುವಿನಲ್ಲೂ ಸೋಲು

ಸೋಪಾನ ಮಾಡಿ ಮತ್ತೆ ಎದ್ದೇನೆಂಬ

ಚೈತನ್ಯ ಕಡಿದೊಗೆದವರ ಮೆರೆದ ಜಂಬ

ಅನ್ನುತ್ತಾರೆ ಜೀವಜಲದಲ್ಲೇ ಜೀವಚ್ಛವ

ಚಿಗುರಿಲ್ಲಾ ಬರಡು ದೇಹ ಇನ್ನೆಲ್ಲಿ ಕಾವ

ಪಿಸುಗುಡುತ್ತೇನೆ ನನ್ನೊಳಗಿದೆ ಜೀವ

ಜಲಚರಗಳ ತವರುಮನೆ ಈ ನನ್ನ ದೇಹ

ತೃಪ್ತ ಬದುಕಿದು ಮೈಯೆಲ್ಲ ಮರಿ-ಮೊಟ್ಟೆ

ಕೊಳೆಯುತಿಹ ತನುವನೆ ತವರಾಗಿಸಿಟ್ಟೆ

ಹಾಲೋ-ಹಾಲಾಹಲವೋ,ಸಮಭಾವದಿ

ಪಾರಮಾರ್ಥದ ಸಾರ್ಥಕ್ಯದೊಳು ಸಮಾಧಿ






........ ಗೋಪಾಲಕೃಷ್ಣ ಹೆಗಡೆ ಕಲಭಾಗ.

17 views0 comments
bottom of page