top of page

ಸುಭಾಷಿತದ ಸಾರ

Updated: Nov 6, 2020

ವಿನಯಂತು ಸುತಾನ್ ಸಂತಃ ಸ್ವಸಂಪಾದ್ಯಾಃ ಪುನರ್ಗುಣಾ! ಸರ್ವಂ ಕೃಷಾಣಾಃ ಕುರ್ವಂತು ಬೀಜಂ ಸೂತೇಂಕುರಂ ಸ್ವತಃ ಮಕ್ಕಳಿಗೆ ಶಿಕ್ಷಣವನ್ನು ನೀಡುವುದುಪಾಲಕರ ಕರ್ತವ್ಯ.ಆದರೆ ವಿನಯವನ್ನು ಮಾತ್ರ ಮಕ್ಕಳೇ ಸಂಪಾದಿಸಿಕೊಳ್ಳಬೇಕು.ಕೃಷಿಕರು ಎಲ್ಲವನ್ನೂ ಮಾಡುತ್ತಾರೆ.ಆದರೆ ಮೊಳಕೆಯೊಡೆಯುವ ಕಾರ್ಯವನ್ನು ಮಾತ್ರ ಬೀಜವೇ ಮಾಡಬೇಕು ಸುಭಾಷಿತವು ಹೇಳುವಂತೆ ಮಕ್ಕಳಿಗೆ ಶಿಕ್ಷಣ ,ಊಟ, ಬಟ್ಟೆ ಮುಂತಾದ ಅವಶ್ಯಕತೆಗಳನ್ನು ತಂದೆತಾಯಿಗಳು ಪೂರೈಸುವುದು ಕರ್ತವ್ಯವಾಗಿರುತ್ತದೆ .ಆದರೆ ಮಕ್ಕಳಿಗೂ ಒಂದು ಕರ್ತವ್ಯವೆಂದು ತಮ್ಮ ನಡೆ ನುಡಿಗಳ ಕುರಿತು ಎಚ್ಚರ ಅತ್ಯಗತ್ಯ.ಏನು ಬೇಕಾದರೂ ಮಾಡುತ್ತೇವೇ ಎಂದರೆ ಅದು ಅಕ್ಷಮ್ಯವೂ ಹೌದು, ಅನಾಚಾರವೂ ಹೌದು.ಶಿಕ್ಷಣ ಪದ್ಧತಿಯಲ್ಲಿ ನೈತಿಕ ಮೌಲ್ಯಕ್ಕೇ ಒಂದು ಪಾಠವಿರಬೇಕಾಗಿದ್ದು ಅವಶ್ಯಕ ಎಂದು ಇತ್ತೀಚಿನ ಮಕ್ಕಳ ವರ್ತನೆಯಿಂದ ಕಂಡುಬರುತ್ತದೆ...ಒಂದೇ ಎರಡೇ ಮಕ್ಕಳು, ...ಇಬ್ಬರೂ ದುಡಿಯುತ್ತಿರುವುದು ...ತಮ್ಮ ಗಿಲ್ಟ್ ಮುಚ್ಚಿಕೊಳ್ಳಲು ಅವರು ಬೇಡಿದ್ದನ್ನು ಕೊಡಿಸಿದಾಗ ಹಠ, ಅಹಂಭಾವ ,ಹಿರಿಯರೆಂದರೆ ಕೇವಲ ಎಂಬ ಭಾವ ಬೆಳೆದು ಮುಂದೆ ಸಮಾಜಕ್ಕೆ ಹಾನಿ ಮಾಡಲು ಸಹಕಾರಿಯಾಗುತ್ತದೆ.ಬಾಲ್ಯದಲ್ಲೇ ಕಷ್ಟಗಳನ್ನು ಎದುರಿಸಿ ತಾಳ್ಮೆ ಬೆಳೆಸಿಕೊಂಡ ಮಗುವೇ ಮುಂದೆ ಗಟ್ಟಿಕಾಳಾಗುತ್ತದೆ..ಅಗಾಧ ಬಂಡೆಗಲ್ಲನ್ನು ಸೀಳಿ ಹೊರಬರುವ ಬೀಜ ಗಟ್ಟಿಯಾಗಿ ಹೆಮ್ಮರವಾಗಿ ನಿಲ್ಲಬಲ್ಲದು..ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋ ಭವ ಎಂದು ಹಿರಿಯರು ಸುಮ್ಮನೇ ಹೇಳಿಲ್ಲ...ಅವರನ್ನೆಲ್ಲ ದೇವರ ಸ್ಥಾನದಲ್ಲಿಟ್ಟು ಗೌರವಿಸಿದಾಗ ವಿನಯವು ತಾನೇ ತಾನಾಗಿ ಅರಳುತ್ತದೆ.ವಿದ್ಯಾ ವಿನಯೇನ ಶೋಭತೇ ಎಂಬ ಉಕ್ತಿಯಲ್ಲಿ ಬೇಕಾದಷ್ಟು ಕಲಿತರೂ ವಿನಯವಿಲ್ಲದಿದ್ದರೆ ಎಲ್ಲವೂ  ಶೂನ್ಯವೇ....ಹಾಗಾಗಿ ಮಕ್ಕಳಿರುವಾಗಲೇ ವಿನಯದ ನಡೆನುಡಿಗಳನ್ನು ಉತ್ತಿ ಬಿತ್ತಬೇಕು          ಅಬ್ರಹಾಂ ಲಿಂಕನ್, ರಾಮಕೃಷ್ಣ ಪರಮಹಂಸರು, ಲಾಲಬಹಾದ್ದೂರ ಶಾಸ್ತ್ರೀ, ನರೇಂದ್ರ ಮೋದಿ ಇನ್ನೂ ಅನೇಕರಾರೂ ಬಾಯಲ್ಲಿ ಚಿನ್ನದ ಚಮಚೆಯನ್ನಿಟ್ಟುಕೊಂಡು ಹುಟ್ಟಿದವರಲ್ಲ.ಅದರೆ ತಮ್ಮ ಸ್ವಕರ್ತೃತ್ವದಿಂದ ತಮ್ಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡಿಕೊಂಡವರು...ಸಮಾಜಕ್ಕೆ ಕೊಡುಗೆಯಾದವರು...ಧನ್ಯತೆಯನ್ನು ತಂದು ಕೊಟ್ಟವರು...    ಎಳೆವೆಯಲ್ಲಿಯೇ ಮಕ್ಕಳು ಮನೆಯ ಸುರಕ್ಷಿತವಾದ ಪರಿಸರದಲ್ಲಿ ಬೆಳೆದರೂ ಬೆಳೆಯುತ್ತ ಸಾಂಗತ್ಯ ದೋಷದಿಂದ ಮನೆಗೆ ,ಸಮಾಜಕ್ಕೆ ಮಾರಕವಾಗಬಲ್ಲರು.ಅಲ್ಲಿ ತಾಯ್ತಂದೆಗಳ ಜವಾಬ್ದಾರಿಗಿಂತಲೂ ಶಾಲೆಯ ಗುರುಗಳ ಜವಾಬ್ದಾರಿ ಗುರುತರವಾಗಿರುತ್ತದೆ.ನನಗನಿಸುತ್ತದೆ ,ಪ್ರತಿ ಮಾಧ್ಯಮಿಕ ಶಾಲೆಯಲ್ಲೂ  ಒಬ್ಬ ಮಕ್ಕಳ ಕೌನ್ಸಿಲರ್ ರ ಅವಶ್ಯಕತೆ ಬಹಳಷ್ಟು  ಇದೆ ಯೆಂದು.ಯಾಕೆಂದರೆ ಆ ಕಾಲ ಮಕ್ಕಳ ಮಾನಸಿಕ ಬೆಳವಣಿಗೆಯ ಕಾಲ, ಹಾರ್ಮೋನ್ ಗಳ ಬದಲಾವಣೆಯ ಕಾಲ....ಹೆಣ್ಣುಮಕ್ಕಳಲ್ಲಿ ಋತುಸ್ರಾವದ ಪ್ರಾರಂಭದ ಕಾಲವಾದರೆಗಂಡುಮಕ್ಕಳಲ್ಲಿ ಮೀಸೆ ಮೂಡುವ , ಧ್ವನಿಯಲ್ಲಿ ಬದಲಾವಣೆಯ ,ಪ್ರಬುದ್ಧತೆಯ ಸಂಕೇತದ ಕಾಲ,ಹೀಗಾಗಿ ಮಾನಸಿಕ ಏರುಪೇರು ಸಹಜ...ಆ ಸಮಯದಲ್ಲಿಮಕ್ಕಳಿಗೆ ಭರವಸೆಯ ,ಸಾಂತ್ವನದ, ಆತ್ಮವಿಶ್ವಾಸವನ್ನು ಹುಟ್ಟು ಹಾಕುವ ಸಮಯವಾಗಿರುತ್ತದೆ..ಇಲ್ಲಿ ಶಾಲೆಯ ಗುರುಗಳು ತಮ್ಮ ವಿದ್ಯಾರ್ಥಿಗಳ ಅಭ್ಯುದಯಕ್ಕೆಶ್ರಮಿಸಬೇಕಾಗಿದ್ದು ಅವಶ್ಯಕ..ಮಾರ್ಕ್ಸಗಳ ಬೆನ್ನು ಹತ್ತದೇ   ಮಕ್ಕಳ ಮಾನಸಿಕ ಬೆಳವಣಿಗೆ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವುದು ಪ್ರತಿ ಶಿಕ್ಷಕನ ಅದ್ಯ ಕರ್ತವ್ಯವೇ ಅಗಿದೆ.ಪಗಾರಕ್ಕಾಗಿ ದುಡಿಯದೇ ಮುಂದಿನ ಪೀಳಿಗೆಯ ಸಶಕ್ತ ನಿರ್ಮಾಣ ಮಾಡುವುದು ಇಂದಿನ ಶಿಕ್ಷಕರ ಜವಾಬ್ದಾರಿಯೇ ಆಗಿದೆ.           ಮಕ್ಕಳ ಮನಸ್ಸು ಹಸಿಗೋಡೆಯಂತಿರುತ್ತದೆ .ಬಿತ್ತಿ ಬೆಳೆಯುವ ಬೀಜ ಮನದ  ಗೋಡೆಯಲ್ಲಿ  ನೆಟ್ಟು ಹೆಮ್ಮರವಾಗಲು ಸಹಾಯ ಮಾಡುವಂತಿರಬೇಕು.ಮಗು ಅನುಕರಣೆಯಿಂದಲೇ ಕಲಿಯುವುದು .ಅದರೆ ಸ್ವಸಾಮರ್ಥ್ಯದ ಅರಿವು ಮೂಡಿಸುವುದು ಅವಶ್ಯಕ.ತನ್ನ ತಾ ತಿದ್ದಿ ನಡೆದರೆ ಮಾತ್ರ ಜಗದಲ್ಲಿ ಹೇರಳ ಅವಕಾಶ ಮೂಡಿ ಧಾಪುಗಾಲಿಟ್ಟು ಮುನ್ನಡೆಯಬಲ್ಲದು.ಅಹಂಭಾವ, ಹೆಚ್ಚುಗಾರಿಕೆ ಸ್ವಪ್ರತಿಷ್ಠೆ, ಕೃತಘ್ನತೆ ಎಂದಿಗೂ ಉಪಯೋಗಕ್ಕೆ ಬರುವುದೇ ಇಲ್ಲ.ಇಂದೇನಾಗುತ್ತಿದೆ, ಹೇರಳ ಹಣಕೊಟ್ಟು ಪ್ರತಿಷ್ಠಿತ ಶಾಲೆಯಲ್ಲಿ‌ಕಲಿಸಿದಾಗ ಹೊರ ಬರುವ ಪ್ರೊಡಕ್ಟು ಸೊಕ್ಕಿನ ಮುದ್ದೆಯೇ ಆಗಿರುತ್ತದೆ. ಪರಿಸರವೇ ಹಾಗಿರುವಾಗ ಮಕ್ಕಳನ್ನು ದೂಷಿಸುವುದು ಹೇಗೆ...ಪ್ರತಿಮಾಧ್ಯಮಿಕ ಶಾಲೆಯಲ್ಲೂ ಒಬ್ಬ ಸೈಕೋ ಅನ್ಯಾಲಿಸಿಸ್ನ್ ನೇಮಕ ಮಾಡಬೇಕು ,ವ್ಯಕ್ತಿತ್ವ ದೋಷಗಳನ್ನು ಅಲ್ಲಿಯೇ ಕಂಡುಹಿಡಿದು ಸಮಾಜಕ್ಕೆ ಉಪಯುಕ್ತವಾಗುವಂತೆ ಮಾರ್ಗದರ್ಶನ ನೀಡಿ  ಬೆಳೆಸಿದಾಗ ಮುಂದಿನ ಪೀಳಿಗೆಯ ಬಗ್ಗೆ ತಾಯ್ತಂದೆಯರು ನಿಶ್ಚಿಂತ ಭಾವ ಹೊಂದಬಹುದು.ಮತ್ತು ಸಶಕ್ತ ಸಮಾಜ, ನಾಡು ದೇಶ ನಿರ್ಮಾಣವಾಗಬಹುದು..ಅಲ್ಲವೇ? -ದೀಪಿಕಾ ಚಾಟೆ, ಬೆಳಗಾವಿ


27 views0 comments

Comments


bottom of page