top of page

ಸೂಫಿ ಕತೆಗಳು

೧. ಒಮ್ಮೆ ಬಹಳ ತೊಂದರೆಗೆ ಸಿಕ್ಕಿಕೊಂಡ ಮನುಷ್ಯ ತನ್ನ ತೊಂದರೆಗಳೆಲ್ಲಾ ನಿವಾರಣೆಯಾದರೆ ಮನೆಯನ್ನು ಮಾರಿ ಅದರಿಂದ ಬಂದ ಹಣವನ್ನು ಬಡಬಗ್ಗರಿಗೆ ಹಂಚುವುದಾಗಿ ಪ್ರಮಾಣ ಮಾಡಿದ.ಕೊನೆಗೆ ಒಂದು ದಿನ ಅವನ ತೊಂದರೆಗಳೆಲ್ಲ ನಿವಾರಣೆಯಾದವು.ಅವನಿಗೆ ತಾನು ಮಾಡಿದ ಪ್ರಮಾಣವನ್ನು ನಡೆಸಿಕೊಡ ಬೇಕಾಗಿ ಬಂತು ಬೇಕಾಗಿ  ಬಂದಿತು.ಅವರೆ ಮನೆ ಮಾರಿ ಬಂದ ಹಣವನ್ನು ಬಡ ಬಗ್ಗರಿಗೆ ಹಂಚಲು ಅವನಿಗೆ ಮನಸ್ಸು ಬರಲಿಲ್ಲ.ಅದಕ್ಕಾಗಿ ಅವನೊಂದು ಉಪಾಯ ಮಾಡಿದ.

       ತನ್ನ  ಮನೆ ಹಾಗು ತನ್ನ ಬೆಕ್ಕನ್ನು ಆತ ಮಾರಾಟಕ್ಕೆ ಇಟ್ಟನು.ಮನೆಯ ಬೆಲೆ ಒಂದು ಬೆಳ್ಳಿಯ ನಾಣ್ಯ.ಬೆಕ್ಕಿನ ಬೆಲೆ ಒಂದು ಸಾವಿರ ನಾಣ್ಯ.ಆದರೆ ಕೊಳ್ಳುವವರು ಎರಡನ್ನು ಒಟ್ಟಿಗೆ ಕೊಂಡುಕೊಳ್ಳಬೇಕು.

   ಯಾರೊ ಒಬ್ಬ ಎರಡನ್ನು ಕೊಂಡುಕೊಂಡ.ಈತ  ಮನೆ ಮಾರಿ ಬಂದ  ಒಂದು ಬೆಳ್ಳಿಯ ನಾಣ್ಯವನ್ನು ಬಡ ಬಗ್ಗರಿಗೆ  ಹಂಚಿ ತಾನು ಮಾಡಿದ ಪ್ರಮಾಣ ಉಳಿಸಿಕೊಂಡ.ಬೆಕ್ಕು ಮಾರಿ ಬಂದ ಹಣದಿಂದ ಹೊಸ ಮನೆಯನ್ನು ಕೊಂಡುಕೊಂಡನು.


( 'ನಿಜವಾದ ಸೂಫಿ ಯಾವ ಧರ್ಮದ ಹಿಂಬಾಲಕನು ಅಲ್ಲ.ಯಾವ ಧರ್ಮದ ಕಟ್ಟು ಪಾಡುಗಳಿಗೂ ಆತ ಒಳ ಪಟ್ಟವನಲ್ಲ.ಸೂಫಿಸಂ ಎನ್ನುವುದು ಪ್ರೇಮದ ಅನುಭಾವದ ಹಾದಿ.ಆ ಹಾದಿಯ ಪಯಣ ಬೇರೆ ಎಲ್ಲಿಗೂ ಅಲ್ಲ. ಬದಲಿಗೆ ತನ್ನದೆ ಆತ್ಮದೆಡೆಗೆ.ಆ ಹಾದಿಯಲ್ಲಿ ಹೊರಟವನು  ತನ್ನ ಹೃದಯದಲ್ಲೇ ಸತ್ಯ ಅಥವಾ ದೇವರನ್ನು ಕಂಡುಕೊಳ್ಳುತ್ತಾನೆ.ಆ ಸತ್ಯ ಅಥವಾ ದೇವರು ಬೇರೆ ಯಾರೂ ಅಲ್ಲ.'ನೀನೇ ಎಂಬ ನಾನು' - ಜೆ.ಬಾಲಕೃಷ್ಣ.


ಆಲೋಚನೆ  ಪ್ರಯೋಗ ಸಂಚಿಕೆ ಸಪ್ಟಂಬರ- ನವಂಬರ ೨೦೦೨.

ಡಾ.ಶ್ರೀಪಾದ ಶೆಟ್ಟಿ ಸಂಪಾದಕ

133 views1 comment

1 comentário


Nishanth Shreepad
Nishanth Shreepad
27 de jun. de 2020

ತುಂಬಾ ಚೆನ್ನಾಗಿದೆ

Curtir
bottom of page