ಸಾಧಕನ ಹಿಂದೆಯೇ
ಶತ್ರುಗಳು ಹುಟ್ಟುವರು
ಪ್ರತಿ ಗೆಲುವಿನ ಹಿಂದೆ ಸೋಲು
ಹೊಂಚು ಹಾಕಿ ಕಾದಿಹುದು
ರೆಪ್ಪೆ ಮುಚ್ಚದಾ ಕಂಗಳು
ಹದಕೆ ಬಾರದ ಎದೆ ಬಡಿತ
ತೋಯ್ದ ದಿಂಬು
ಕಂಪಿಸುವ ತುಟಿಗಳು
ಯಾವ ಕ್ಷಣದಲಿ ಏನಾಗುವುದೊ
ಎಂಬ ಅಪರಿಮಿತ ಭಯ
ಈ ನಡುವೆ ತೂರಿ ಬಹುದೆಂಬ
ಮಂದಸ್ಮಿತ ಚೆಲುವ ಕಿರಣ!
ಭರವಸೆಯೇ ಜೀವನ💕
ಸುವಿಧಾ ಹಡಿನಬಾಳ
Comments